ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಟಯೋಟಾ ಕಾರ್ಮಿಕರು ಹಾಗೂ ಆಡಳಿತ ಮಂಡಳಿಯ ನಡುವೆ ಉದ್ಭವಿಸಿದ್ದ ಸಮಸ್ಯೆಗಳ ಪರಿಹಾರದಲ್ಲಿ ಪ್ರಮುಖ ಪಾತ್ರವಹಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ ಶೆಟ್ಟರ್ ಅವರನ್ನು ಟಯೋಟಾ ಕಾರ್ಖಾನೆಯ ಆಡಳಿತ ಮಂಡಳಿಯ ಅಧಿಕಾರಿಗಳು ಇಂದು ಭೇಟಿ ಮಾಡಿ ಧನ್ಯವಾದ ಸಲ್ಲಿಸಿದರು.
2020 ನವೆಂಬರ್ 9 ರಂದು ಪ್ರಾರಂಭವಾದ ಕಾರ್ಮಿಕರ ಮುಷ್ಕರದ ಸಂಧರ್ಭದಲ್ಲಿ ಕೈಗಾರಿಕಾ ಸಚಿವರು ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಮುಷ್ಕರ ಮುಂದುವರೆದಾಗ ಕಾರ್ಮಿಕ ಸಚಿವರು, ಆ ಪ್ರದೇಶದ ಜನಪ್ರತಿನಿಧಿಗಳು ಹಾಗೂ ಕೈಗಾರಿಕಾ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ 2 ಬಾರಿ ಸಭೆಯನ್ನು ನಡೆಸಿದ್ದರು. ಅಲ್ಲದೆ, ಹಲವಾರು ಬಾರಿ ಸಚಿವರನ್ನು ಭೇಟಿಯಾಗಿದ್ದ ಕಾರ್ಮಿಕ ಸಂಘಟನೆಗಳ ನಿಯೋಗ ಹಾಗೂ ಅಧಿಕಾರಿಗಳ ತಂಡಕ್ಕೆ ಸಚಿವರು ಸಮಸ್ಯೆಯ ಪರಿಹಾರಕ್ಕೆ ಸಲಹೆ ಹಾಗೂ ಸೂಚನೆಗಳನ್ನು ನೀಡಿದ್ದರು ಎನ್ನಲಾಗಿದೆ.
ಸಮಸ್ಯೆ ಇನ್ನು ಮುಂದುವರೆದಾಗ ಹಲವಾರು ಬಾರಿ ಸಚಿವರನ್ನು ಕಾರ್ಮಿಕ ಸಂಘಟನೆಯ ಮುಖಂಡರುಗಳು ಭೇಟಿ ಮಾಡಿ ಸಲಹೆ ಸೂಚನೆಯನ್ನು ಪಡೆದುಕೊಂಡಿದ್ದರು. ಅಲ್ಲದೆ, ಮುಷ್ಕರದ ವೇಳೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಬಹಳಷ್ಟು ಸಹಾಯವನ್ನು ಮಾಡಿದ್ದಾರೆ. ಇದಕ್ಕೆ ಸಚಿವ ಜಗದೀಶ್ ಶೆಟ್ಟರ್ ಅವರ ಸೂಚನೆಗಳ ಕಾರಣವಾಗಿದ್ದವು. ತಮ್ಮನ್ನು ಭೇಟಿ ಮಾಡಿದ ಟೊಯೋಟಾ ಆಧಿಕಾರಿಗಳಿಗೆ ಇನ್ನು ಮುಂದೆ ಸಮಸ್ಯೆಗಳು ಉದ್ಭವಿಸದ ರೀತಿಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವರು ಸಲಹೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post