ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದೂಧಸಾಗರ್ ಮತ್ತು ಕುಲೆಂ ನಿಲ್ದಾಣಗಳ ನಡುವೆ ಸರಕು ರೈಲು #Goods Train ಗಾಡಿಯಲ್ಲಿ ಅನಧಿಕೃತವಾಗಿ ಪ್ರಯಾಣ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೈಋತ್ಯ ರೈಲ್ವೆಯ ರೈಲ್ವೆ ಸುರಕ್ಷತಾ ಪಡೆ #RPF ಇದನ್ನು ಗಂಭೀರವಾಗಿ ಪರಿಗಣಿಸಿ, ವಿಡಿಯೋ ಶೂಟ್ ಮಾಡಿ ಹರಡಿದವರ ವಿರುದ್ಧ ಪ್ರಕರಣ ದಾಖಲಿಸಿದೆ.
ದೂಧಸಾಗರ್ ಜಲಪಾತ ಪ್ರದೇಶ ಪ್ರವೇಶ ನಿರ್ಬಂಧಿತವಾಗಿದ್ದರೂ, ಕೆಲ ಪ್ರವಾಸಿಗರು ಸ್ಥಳೀಯ ಏಜೆಂಟ್‌ಗಳ ಮೂಲಕ ದೂಧಸಾಗರದಿಂದ – ಕುಲೆಂವರೆಗೆ ಕುಳಿತು ವಿಡಿಯೋ ಮಾಡಿರುವುದು ತನಿಖೆಯ ವೇಳೆ ಬಹಿರಂಗವಾಗಿದೆ. ಇದು ಅನಧಿಕೃತ ಮತ್ತು ಅಪಾಯಕಾರಿಯಾಗಿದೆ.
ಸರಕು ಗಾಡಿಗಳಲ್ಲಿ ಪ್ರಯಾಣ ಮಾಡಲು ನಿರ್ಬಂಧ ಇದೆ ಮತ್ತು ಅದು ಶಿಕ್ಷಾರ್ಹವಾಗಿದೆ. ಇಂತಹ ಕಾನೂನುಬಾಹಿರ ಕ್ರಮಗಳು ಪ್ರವಾಸಿಗರ ಪ್ರಾಣವನ್ನೇ ಅಪಾಯಕ್ಕೆ ಒಳಪಡಿಸುತ್ತವೆ ಮತ್ತು ದಂಡನೀಯ ಕೃತ್ಯಗಳಾಗಿವೆ. ಈ ವಿಷಯವನ್ನು ರೈಲ್ವೆ ಆಡಳಿತವು ಗಂಭೀರವಾಗಿ ಪರಿಗಣಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
ಸಾರ್ವಜನಿಕ ಹಾಗೂ ಪ್ರವಾಸಿಗರು ಗೂಡ್ಸ್ ರೈಲು ಗಾಡಿಗಳಲ್ಲಿ ಪ್ರಯಾಣ ಮಾಡುವುದು ಸಂಪೂರ್ಣವಾಗಿ ನಿಷಿದ್ಧ ಮತ್ತು ರೈಲ್ವೆ ಕಾಯ್ದೆಯಡಿಯಲ್ಲಿ ಶಿಕ್ಷಾರ್ಹವಾಗಿದ್ದು, ನಿರ್ಬಂಧಿತ ಪ್ರದೇಶಗಳಿಗೆ ಪ್ರವೇಶಿಸಲು ಯತ್ನಿಸದಿರಿ ಎಂದು ರೈಲ್ವೆ ಇಲಾಖೆ ಎಚ್ಚರಿಕೆ ನೀಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post