ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಸಾರಾಂಶದಂತೆ ಬೆಂಗಳೂರು ವಿಶ್ವ ವಿದ್ಯಾಲಯವನ್ನು ಡಾ. ಮನಮೋಹನ್ ಸಿಂಗ್ ಬೆಂಗಳೂರು ವಿಶ್ವವಿದ್ಯಾಲಯ ಎಂದು ಮರು ನಾಮಕರಣ ಮಾಡುವುದು ಮಹತ್ವಪೂರ್ಣವಾದ ಹೆಜ್ಜೆಯಾಗಿದೆ.
ಇಂತಹ ಬದಲಾವಣೆಯ ಉದ್ದೇಶವನ್ನು ಸಾಫಲ್ಯಗೊಳಿಸಲು, ವಿಶ್ವವಿದ್ಯಾಲಯವು ಹಣಕಾಸು ನೀತಿ, ಆರ್ಥಿಕ ನೀತಿ, ಆರ್ಥಿಕ- ತತ್ತ್ವಶಾಸ್ತ್ರ ಮತ್ತು ಸಾರ್ವಜನಿಕ ನೀತಿಯ ಬಗ್ಗೆ ಅದರ ಕಾರ್ಯಕ್ರಮಗಳ ಗುಣಮಟ್ಟದಲ್ಲಿ ಸುಧಾರಣೆಯನ್ನು ಮಾಡಲು ಆದ್ಯತೆ ನೀಡಬೇಕು. ಈ ಬದಲಾವಣೆಯು ವಿಶ್ವವಿದ್ಯಾನಿಲಯವನ್ನು ಉನ್ನತ ಚಿಂತನೆಗಳಿಗೆ ದಾರಿ ಮಾಡಿಕೊಡಲಿದೆ.
Also Read>> ಸಿದ್ದರಾಮಯ್ಯ ಬಜೆಟ್ | ಶಿವಮೊಗ್ಗ ಸೇರಿ ಮಲೆನಾಡಿಗೆ ಏನೆಲ್ಲಾ ದೊರಕಿತು? ಇಲ್ಲಿದೆ ವಿವರ
ಇಲ್ಲಿ ಪ್ರಮುಖವಾಗಿ, `ಮುಚ್ಚಲಾಗುತ್ತದೆ’ ಎಂದು ಹೇಳಲಾದ ರಾಜ್ಯದ 7 ವಿಶ್ವವಿದ್ಯಾಲಯಗಳ ಕುರಿತು ಬಜೆಟ್’ನಲ್ಲಿ ಯಾವುದೇ ನಿಖರತೆ ಇಲ್ಲ ಎನ್ನುವುದು ಗಮನಿಸಬೇಕಾದ ವಿಚಾರ. ಇವುಗಳನ್ನು ದೊಡ್ಡ ವಿಶ್ವವಿದ್ಯಾಲಯಗಳ ಜೊತೆಗೆ ಪುನರ್ ವಿಲೀನಗೊಳಿಸಿ ಅಭಿವೃದ್ಧಿಗೊಳಿಸುವ ಕುರಿತು ಸ್ಪಷ್ಠತೆ ಕಂಡುಬಂದಿಲ್ಲ.ಒಂದುಗೂಡಿಕೆ ಮತ್ತು ಪುನಃ ಅಭಿವೃದ್ಧಿಯ ಬಗ್ಗೆ ಯಾವುದೇ ಚಿಂತನೆಗಳು ಇಲ್ಲದೆ ಇರುವುದರ ಬಗ್ಗೆ ನಿರಾಸೆ ವ್ಯಕ್ತವಾಗಿದೆ. ಈ ಬಗ್ಗೆ ಪ್ರಗತಿ ಮುನ್ನೋಟಗಳನ್ನು ಉಲ್ಲೇಖಿಸದಿರುವುದು ಅತ್ಯುತ್ತಮ ಅವಕಾಶಗಳಿಂದ ಉನ್ನತ ಶಿಕ್ಷಣ ಸಮುದಾಯವನ್ನು ವಂಚಿಸಿದಂತೆ ಆಗಿದೆ.
ಹೆಣ್ಣು ಮಕ್ಳಳಿಗೆ ಅರ್ಥಪೂರ್ಣ ಯೋಜನೆ:
ಪುರುಷರ ವಸತಿ ನಿಲಯಗಳಿಗೆ ಅನುದಾನ ನೀಡುವುದು ಒಳ್ಳೆಯ ಅಭಿವೃದ್ಧಿಯಾಗಿದೆ. ಉನ್ನತ ಶಿಕ್ಷಣ ಪಡೆವ ಹೆಣ್ಣು ಮಕ್ಳಳಿಗೆ ಚೀವಿನಿಂಗ್ ಕರ್ನಾಟಕ ಮಾಸ್ಟರ್ಸ್ ಸ್ಕಾಲರ್’ಶಿಪ್ ಯೋಜನೆಯು ಅರ್ಥ ಪೂರ್ಣವಾಗಿದೆ. ಆದರೂ, ಬಜೆಟ್ ಹೆಚ್ಚು ಸ್ಪಷ್ಟವಾಗಿ ಸಾರ್ವಜನಿಕ ನೀತಿ ಶಿಕ್ಷಣ ಸಂಸ್ಥೆಗಳ ಅಗತ್ಯವನ್ನು ಪರಿಶೀಲಿಸ ಬಹುದಾಗಿತ್ತು. ಇಂತಹ ಸಂಸ್ಥೆಗಳ ಸ್ಥಾಪನೆಯು ಈ ಮಹತ್ವಪೂರ್ಣ ಕ್ಷೇತ್ರದಲ್ಲಿ ಕೌಶಲ್ಯಯುಕ್ತ ವೃತ್ತಿಪರರನ್ನು ಅಭಿವೃದ್ಧಿ ಪಡಿಸುವುದರಲ್ಲಿ ಮಹತ್ತರ ಸಹಾಯವನ್ನು ನೀಡುತ್ತದೆ. ಒಟ್ಟಾರೆ ಇದು ಅತ್ಯುತ್ತಮ ಬಜೆಟ್ ಎಂದು ಹೇಳಲಾಗದು.
ಡಾ. ನವ್ಯಾ ಗುಬ್ಬಿ ಕುರಿತು:
ಡಾ. ನವ್ಯಾ ಗುಬ್ಬಿ ಸತೀಶ್ ಚಂದ್ರ, ಪ್ರಾಧ್ಯಾಪಕರು, ಬರ್ಲಿನ್ ಸ್ಕೂಲ್ ಆಫ್ ಬಿಸಿನೆಸ್ ಅಂಡ್ ಇನ್ನೋವೇಶನ್, ಬರ್ಲಿನ್, ಜರ್ಮನಿ.
ತುಮಕೂರು ಮೂಲದ ಅಪ್ಟಟ ಕನ್ನಡತಿ ಡಾ. ನವ್ಯಾ ಅವರು ಆರ್ಥಿಕ ವಿಷಯಗಳ ಪರಿಣತರು, ವಿಶ್ಲೇಷಣೆ ತಜ್ಞರು, ಹಲವು ಆಂಗ್ಲ ಪತ್ರಿಕೆಗಳಿಗೆ ಅಂಕಣಕಾರರು.
ಜತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಶಿವಮೊಗ್ಗದ ಮೂಲದ ವಿದ್ವಾನ್ ಜೆ.ಎಸ್. ಶ್ರೀಕಂಠ ಭಟ್ಟರ ಶಿಷ್ಯತ್ವದಲ್ಲಿ ಕಲಿತವರು. ಅಖಂಡ ಭಾರತ ಮತ್ತು ಕನ್ನಡ ನಾಡಿನ ಬಗ್ಗೆ ಅಪಾರ ಅಭಿಮಾನ ಮತ್ತು ತುಡಿತ ಇರುವ ಮಹಿಳೆ.
ಸಾಗರದಾಚೆಯ ಜರ್ಮನಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಜವಾಬ್ದಾರಿ ಯುತ ಸ್ಥಾನದಲ್ಲಿ ಇರುವ ಅವರು ಪ್ರಸ್ತುತ ಕೇಂದ್ರ ಬಜೆಟ್ ಬಗ್ಗೆ ಮುಕ್ತ ಅನಿಸಿಕೆಗಳನ್ನು ಇಲ್ಲಿ ಕಲ್ಪ ನ್ಯೂಸ್ ಓದುಗರ ಜತೆ ಹಂಚಿಕೊಂಡಿರುವುದು ಸಂತೋಷಕರ ವಿಚಾರ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post