ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಜಾಗೃತ ಕೋಶ ಜಂಟಿ ಕೃಷಿ ನಿರ್ದೇಶಕರ ಮಾರ್ಗದರ್ಶನದಲ್ಲಿ ಸಹಾಯಕ ಕೃಷಿ ನಿರ್ದೇಶಕರು (ಜಾರಿ ದಳ 1&2) ನಗರದ ಮಾಗಡಿ ರಸ್ತೆಯಲ್ಲಿರುವ ಕೋಸ್ಟಲ್ ಅಗ್ರಿ ಇಂಡಸ್ಟ್ರಿಸ್‌ಗೆ ಭೇಟಿ ನೀಡಿ ಪರಿಶೀಲಿಸಿದಾಗ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಕೃಷಿ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಯಿತು.
ತಯಾರಿಕಾ ಹಾಗೂ ಮಾರಾಟ ಪರವಾನಗಿ ಇಲ್ಲದೆ ಜೈವಿಕ ಕೀಟನಾಶಕಗಳಾದ ಬ್ಯಾಸಿಲಸ್ ಸಬ್ಟಿಲಸ್, ಬ್ಯಾಸಿಲಸ್ ತುರಿಂಜನ್ಸಿಸ್ ಹಾಗೂ ಜಿಬ್ಬರಿಲಿಕ್ ಆಸಿಡ್‌ಗಳನ್ನು ಪ್ಯಾಕಿಂಗ್ ಮಾಡಿ ದಾಸ್ತಾನಿಕರಿಸಿರುವ ಹಿನ್ನೆಲೆಯಲ್ಲಿ ಸುಮಾರು 7.81 ಲಕ್ಷ ಮೌಲ್ಯದ ಸುಮಾರು 200ಲೀ ದಾಸ್ತಾನನ್ನು ಜಪ್ತು ಮಾಡಲಾಯಿತು. ಹಾಗೂ ಅನುಮಾನದ ಮೇರೆಗೆ ಮಾದರಿಗಳನ್ನು ಸಂಗ್ರಹಿಸಿ ಮಾರಾಟ ತಡೆ ನೋಟೀಸ್ ಜಾರಿ ಮಾಡಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post