ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಜೂನ್ 22 ರಂದು ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆಲ್ಕೋಳ ವಿವಿ ಕೇಂದ್ರದಿಂದ ಬರುವ ಎ.ಎಫ್-1, 2 ಮತ್ತು 3 ರ ಫೀಡರ್‍ಗಳಲ್ಲಿ ಮಾರ್ಗಮುಕ್ತತೆ ನೀಡಬೇಕಾಗಿದ್ದು ಈ ವಿತರಣಾ ಕೇಂದ್ರದಿಂದ ಸರಬರಾಜಾಗುವ ಈ ಕೆಳಕಂಡ ಪ್ರದೇಶಗಳಲ್ಲಿ ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಶ್ರೀರಾಮಪುರ, ಭೂಮಿಕಾ ಇಂಡಸ್ಟ್ರೀಸ್, ಪೆಸಿಟ್ ಕಾಲೇಜ್, ಕಿಮ್ಮನೆ ಗಾಲ್ಫ್ ಸ್ಟೇಡಿಯಮ್, ಹಾಲದೇವರ ಹೊಸೂರು, ಗುಡ್ಡದ ಹರಕೆರೆ, ಶಕ್ತಿಧಾಮ, ಪೊಲೀಸ್ ಲೇಔಟ್, ವಿರುಪಿನಕೊಪ್ಪ, ಸಿದ್ಲಿಪುರ, ಮುದ್ದಿನಕೊಪ್ಪ, ಭೋವಿ ಕಾಲೋನಿ, ತ್ಯಾವರೆಕೊಪ್ಪ ಸಿಂಹಧಾಮ, ಗುಡ್ಡದ ಹರಕರೆ, ವೀರಗಾರನಭೈರನಕೊಪ್ಪ, ಬಿಎಸ್‌ಎನ್‌ಎಲ್ ಬಡಾವಣೆ, ಲಂಬಾಣಿ ತಾಂಡ, ಚೆನ್ನಹಳ್ಳಿ, ವೀರನಬೆನವಳ್ಳಿ, ಆಲ್ಕೊಳ, ಮಂಗಳಾಮಂದಿರ ರಸ್ತೆ, ಎಬಿವಿಪಿ ಲೇಔಟ್, ಎಸ್.ವಿ.ಬಡಾವಣೆ, ಗಾಡಿಕೊಪ್ಪ, ಮಲ್ಲಿಗೇನಹಳ್ಳಿ, ಶರಾವತಿ ದಂತ ವೈದ್ಯಕೀಯ ಕಾಲೇಜು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ಉಪವಿಭಾಗ 3 ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















