ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಗ್ರಾಹಕರಿಗೆ ತಡೆರಹಿತ ವಿದ್ಯುತ್ ಸರಬರಾಜು ಸೇರಿದಂತೆ ನಿರ್ವಹಣೆ/ದುರಸ್ತಿ ಸಮಯದಲ್ಲಿ ವಿದ್ಯುತ್ ಲೈನ್ ಸ್ಥಗಿತಗೊಳ್ಳುವುದನ್ನು ತಡೆಯುವ ಪ್ರಯತ್ನದಲ್ಲಿ, ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಾರ್ಪೊರೇಷನ್ ಲಿಮಿಟೆಡ್ ಇನ್ಸುಲೇಟೆಡ್ ಏರಿಯಲ್ ವರ್ಕ್ ಪ್ಲಾಟ್‌ಫಾರ್ಮ್ ವಾಹನಗಳನ್ನು ಟ್ರಾನ್ಸ್‌ಮಿಷನ್ ಲೈನ್ ಮತ್ತು ಸಬ್‌ಸ್ಟೇಷನ್‌ಗಳಿಗಾಗಿ ನಿಯೋಜಿಸಲಿದೆ.
ಈಗಾಗಲೇ ಬೆಂಗಳೂರು, ಚಿತ್ರದುರ್ಗ ಮತ್ತು ಹುಬ್ಬಳ್ಳಿಯಲ್ಲಿ ಇನ್ಸುಲೇಟೆಡ್ ಏರಿಯಲ್ ವರ್ಕ್ ಪ್ಲಾಟ್‌ಫಾರ್ಮ್ ವಾಹನಗಳು ಕಾರ್ಯ ನಿರ್ವಹಿಸುತ್ತಿದ್ದು, ಮೈಸೂರು ಮತ್ತು ಗುಲ್ಬರ್ಗ ವಲಯಕ್ಕಾಗಿ ಇನ್ನೆರಡು ಇನ್ಸುಲೇಟೆಡ್ ಏರಿಯಲ್ ವರ್ಕ್ ಪ್ಲಾಟ್‌ಫಾರ್ಮ್ ವಾಹನಗಳು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿವೆ.

ಸಾಂಪ್ರದಾಯಿಕ ಶೈಲಿಯ ನಿರ್ವಹಣೆಗೆ ವಿದ್ಯುತ್ ಲೈನ್ ಸ್ಥಗಿತಗೊಳಿಸುವ ಅಗತ್ಯವಿದೆ ಮತ್ತು ವಿದ್ಯುತ್ ಮರು ಸಂಪರ್ಕಕ್ಕೆ ಕನಿಷ್ಠ 5 ಗಂಟೆಗಳ ಸಮಯವು ಬೇಕಾಗುತ್ತದೆ. ಇದು ಸಾರ್ವಜನಿಕರ ದೈನಂದಿನ ಜೀವನ ಹಾಗೂ ವಾಣಿಜ್ಯ ವ್ಯವಹಾರಗಳಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ. ಹಾಟ್ (ಲೈವ್) ಲೈನ್ ನಿರ್ವಹಣೆ ತಂತ್ರದೊಂದಿಗೆ, ಕೆಪಿಟಿಸಿಎಲ್ ಅತ್ಯಾಧುನಿಕ ಉಪಕರಣಗಳಾದ ಇನ್ಸುಲೇಟೆಡ್ ಬಕೆಟ್ ವ್ಯಾನ್, ಇನ್ಸುಲೇಟೆಡ್ ಬಕೆಟ್, ಇನ್ಸುಲೇಟೆಡ್ ಸ್ಕ್ಯಾಫೋಲ್ಡಿಂಗ್ ಅನ್ನು ಬಳಸಿಕೊಂಡು ವಿದ್ಯುತ್ ಸ್ಥಗಿತಗೊಳಿಸದೆ ನಿರ್ವಹಣಾ ಚಟುವಟಿಕೆಯನ್ನು ಕೈಗೊಳ್ಳಲು ಉದ್ದೇಶಿಸಿದೆ, ಹೀಗಾಗಿ ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಸಾಧ್ಯ ಮತ್ತು ಇದು ರಾಜ್ಯದ ESCOM ಗಳನ್ನು ಆರ್ಥಿಕ ಸಬಲಗೊಳಿಸಲಿದೆ ಎಂದು ಪಂಕಜ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post