ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಜಯನಗರದ ವಿಜಯ ಸಂಜೆ ಪದವಿಪೂರ್ವ ಕಾಲೇಜಿನ ಆವರಣದ ರಾಮಸ್ವಾಮಿ ಸಭಾಂಗಣದಲ್ಲಿ ಪ್ರಾಧ್ಯಾಪಕ ಸಂಶೋಧಕ ಡಾ. ಆರ್. ವಾದಿರಾಜು ಸಂಪಾದಿಸಿರುವ ‘ವಚನ -ದಾಸ -ಸಂಭ್ರಮ’ ಕೃತಿ ಲೋಕಾರ್ಪಣೆ ಹಾಗೂ ದಾಸ ಸಾಹಿತ್ಯ ವಿಚಾರಗೋಷ್ಠಿ ಆಯೋಜಿಸಲಾಗಿತ್ತು.
67ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನಗರದ ಸಾಹಿತ್ಯ ವಿಚಾರ ವೇದಿಕೆ ಮತ್ತು ವಿಜಯ ಸಂಜೆ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ದಾಸ ಸಾಹಿತ್ಯ ಸಂಶೋಧಕ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಈ ಶತಮಾನದಲ್ಲಿ ಮತ್ತೆ ವಚನಕಾರರ ಮತ್ತು ಹರಿದಾಸರ ವೈಭವವನ್ನು ಮರುಕಳಿಸುವಂತೆ ಈ ಕೃತಿ ಮೂಡಿಬಂದಿದೆ. ಕನ್ನಡ ಕಾವ್ಯ ಪ್ರಪಂಚದ ಎರಡು ಕಣ್ಣುಗಳಂತೆ ಇರುವ ವಿಶಿಷ್ಟ ಪ್ರಕಾರದ ಅಧ್ಯಯನದಿಂದ ಮನಸ್ಸಿನ ದುಗಡ ದೂರವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
Also read: ಡಿ.10, 11ರಂದು ಕೊಡಗು ಕಾಫಿ ಮೇಳ: ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ
ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ, ಕಾಲೇಜಿನ ಪ್ರಾಂಶುಪಾಲ ಪಿ.ಸಿ ನಾಗರಾಜು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದರು. ಕನ್ನಡ ಪ್ರಾಧ್ಯಾಪಕ ಡಾ.ಎಸ್ ಎಲ್ ಮಂಜುನಾಥ ಕೃತಿ ಕುರಿತು ಮಾತನಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ನಡೆದ ದಾಸ ಸಾಹಿತ್ಯ ವಿಚಾರಗೋಷ್ಠಿಯಲ್ಲಿ ಡಾ. ವಿದ್ಯಾ ಕಸಬೇರವರ ಅಧ್ಯಕ್ಷತೆಯಲ್ಲಿ ಡಾ.ವಾದಿರಾಜ ಅಗ್ನಿ ಹೋತ್ರಿರವರು ‘ಹರಿದಾಸರ ಛಂದೋ ಮಾಲಿಕೆ’ ಕುರಿತು ಡಾ. ವಿದ್ಯಾ ರಾವ್, ‘ಶ್ರೀ ವ್ಯಾಸರಾಯರ ಸುಳಾದಿಯ ಅಂಕಿತ ಸಂದಿಗ್ಧ ಸ್ಪಷ್ಟೀಕರಣ’ ಬಗ್ಗೆ ,ಡಾ. ಎಲ್. ಸುಧಾ ಅವರು ‘ಪಾಠ ಪರಿಷ್ಕರಣೆ’ ವಿಷಯ ಮಂಡನೆ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post