ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ವರುಣಾ ಕ್ಷೇತ್ರದ ಶಾಲೆಗಳ ಅಭಿವೃದ್ಧಿ ವಿಚಾರದಲ್ಲಿ ನಡೆದ ದೂರವಾಣಿ ಮಾತುಕತೆಯನ್ನು ವರ್ಗಾವಣೆಯದು ಎಂದು ಕಲ್ಪಿಸಿಕೊಂಡು ಎಚ್.ಡಿ. ಕುಮಾರಸ್ವಾಮಿ ಅವರು ಆರೋಪ ಮಾಡಿರುವುದು ಮಾಜಿ ಮುಖ್ಯಮಂತ್ರಿಯಾದ ಅವರಿಗೆ ಶೋಭೆ ತರದು ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ Minister Zameer Ahmad Khan ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು ಇದೊಂದು ಹಳೆಯ ಕ್ಲಿಪಿಂಗ್. ವರ್ಗಾವಣೆ ಸಂಬಂಧ ಯಾವುದೇ ಮಾತು ಆಡಿಲ್ಲ. ಶಾಲೆಗಳ ಅಭಿವೃದ್ಧಿಗೆ ಸೀಮಿತವಾಗಿ ಮಾತನಾಡಿದ್ದಾರೆ. ಆದರೂ ಅದನ್ನೇ ರಾಜಕೀಯವಾಗಿ ಬಳಸಿಕೊಂಡು ಇಲ್ಲ ಸಲ್ಲದ ಆರೋಪ ಮಾಡಿರುವುದು ಸರಿಯಲ್ಲ. ತಮ್ಮ ಮೇಲಿನ ವಿವಾದದ ಗಮನ ಬೇರೆಡೆ ಸೆಳೆಯಲು ಯತಿಂದ್ರ ವಿಚಾರ ಎಳೆದು ತಂದಿದ್ದಾರೆ ಎಂದು ದೂರಿದ್ದಾರೆ.
ರಾಜಕಾರಣದಲ್ಲಿ ಸತ್ಯಾoಶ ಇದ್ದರೆ ದಾಖಲೆ ಸಮೇತ ಆರೋಪ ಮಾಡಲಿ ಅದು ಬಿಟ್ಟು ಹತಾಶಾರಾಗಿ ಕಥೆ ಕಟ್ಟಿ ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ ಎಂದು ಹೇಳಿದ್ದಾರೆ.
Also read: ‘ಕುಸುಮ್ ಬಿ’: ಮಾಸ್ಟರ್ ಟ್ರೈನರ್ ಗಳನ್ನು ನಿಯೋಜಿಸಲಿದೆ ಇಂಧನ ಇಲಾಖೆ | ಏನಿದರ ವಿಶೇಷ?
ವರುಣ ಕ್ಷೇತ್ರದ ಆಶ್ರಯ ಸಮಿತಿಯ ಅಧ್ಯಕ್ಷರು ಮತ್ತು ಕೆಡಿಪಿ ಸದಸ್ಯರಾಗಿರುವ ಮಾಜಿ ಶಾಸಕ ಯತೀಂದ್ರ ಅವರು ಕ್ಷೇತ್ರದ ಅಭಿವೃದ್ಧಿ ಬಗ್ಗೆಯೂ ಮಾತನಾಡಬಾರದೇ ಎಂದು ಪ್ರೆಶ್ನೆ ಮಾಡಿದ್ದಾರೆ.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















