ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇಲ್ಲಿನ ಭಾರೀ ಟ್ರಾಫಿಕ್’ನಲ್ಲಿ ಸಿಲುಕಿದ್ದ ವೈದ್ಯರೊಬ್ಬರು, ತಮ್ಮ ರೋಗಿಯೊಬ್ಬರಿಗೆ ತುರ್ತು ಶಸ್ತ್ರ ಚಿಕಿತ್ಸೆ ನಡೆಸುವ ಸಲುವಾಗಿ ಸುಮಾರು 45 ನಿಮಿಷ ಓಡಿಕೊಂಡೇ ಆಸ್ಪತ್ರೆ ತಲುಪಿದ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ರಾಷ್ಟ್ರದಾದ್ಯಂತ ವೈರಲ್ ಆಗಿದೆ.
@BPACofficial @BSBommai @sarjapurblr @WFRising @blrcitytraffic sometimes better to run to work ! pic.twitter.com/6mdbLdUdi5
— Govind Nandakumar MD (@docgovind) September 10, 2022
ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸಾ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಗೋವಿಂದ ನಂದಕುಮಾರ್ ಅವರೇ ಈಗ ವೈರಲ್ ಆಗಿರುವ ವೀಡಿಯೋದಲ್ಲಿರು ಮಾದರಿ ವೈದ್ಯ.
ಆಗಸ್ಟ್ 30ರಂದು ಆಸ್ಪತ್ರೆಗೆ ಡಾ.ಗೋವಿಂದ ನಂದಕುಮಾರ್ ಅವರು ಹೊರಟಿದ್ದರು. ಆದರೆ, ಭಾರೀ ಮಳೆಯಿಂದಾಗಿ ರಸ್ತೆಗಳೆಲ್ಲಾ ಜಲಾವೃತ್ತವಾಗಿದ್ದವು. ಇವರು ತೆರಳಬೇಕಿದ್ದ ಸರ್ಜಾಪುರ-ಮಾರತಹಳ್ಳಿ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದೇ ವೇಳೆ ಈ ವೈದ್ಯರು ರೋಗಿಯೊಬ್ಬರಿಗೆ ಪಿತ್ತಕೋಶದ ಶಸ್ತ್ರ ಚಿಕಿತ್ಸೆ ನಡೆಸಬೇಕಿತ್ತು. ಆದರೆ, ಟ್ರಾಫಿಕ್ ಜಾಮ್’ನಿಂದಾಗಿ ಮುಂದಕ್ಕೆ ಸಾಗಲು ಸಾಧ್ಯವಾಗಲಿಲ್ಲ. ಹೀಗಾಗಿ, ಚಿಂತಿಸಿದ ಇವರು ತತಕ್ಷಣ ಕಾರಿನಿಂದ ಇಳಿದು ಓಡಲು ಆರಂಭಿಸಿದರು.
Also read: ಲಕ್ಷಾಂತರ ರೂ. ಮೌಲ್ಯದ ಆಭರಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ
ಈ ಕುರಿತಂತೆ ಸ್ವತಃ ಮಾತನಾಡಿದ ಡಾ. ನಂದ ಕುಮಾರ್ ಅವರು, ನಾನು ಮಣಿಪಾಲ್ ಆಸ್ಪತ್ರೆ ತಲುಪಬೇಕಿತ್ತು. ಭಾರೀ ಮಳೆ ಹಾಗೂ ನೀರು ನಿಂತಿದ್ದರಿಂದ ಕಿಮೀ ಗಟ್ಟಲೆ ರಸ್ತೆ ಜಾಮ್ ಆಗಿತ್ತು. ನನಗೆ ಸಮಯ ವ್ಯರ್ಥ ಮಾಡಲು ಇಷ್ಟವಿರಲಿಲ್ಲ. ರೋಗಿಗಳು ನನಗಾಗಿ ಕಾಯುತ್ತಿದ್ದರು. ಅದಕ್ಕಾಗಿಯೇ ನಾನು ಓಡಲು ನಿರ್ಧರಿಸಿದೆ ಎಂದಿದ್ದಾರೆ.
ಸುದ್ದಿ ಸಂಸ್ಥೆಯ ಮೂಲಗಳ ಪ್ರಕಾರ, ಕಳೆದ 18 ವರ್ಷಗಳಿಂದ ನಂದಕುಮಾರ್ ಅವರು ಅನೇಕ ಸಂಕೀರ್ಣ ಶಸ್ತ್ರಚಿಕಿತ್ಸೆಗಳಿಗೆ ನಡೆಸಿದ ವೈದ್ಯರಾಗಿ ಖ್ಯಾತಿ ಪಡೆದಿದ್ದಾರೆ. ರೋಗಿಗಳ ಬಗ್ಗೆ ಯೋಚಿಸುತ್ತಾ ವೈದ್ಯರು ಆಸ್ಪತ್ರೆಯತ್ತ ಓಡಿದ ರೀತಿ ಎಲ್ಲರನ್ನು ಆಕರ್ಷಿಸಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post