ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಹತ್ವದ ಬೆಳವಣಿಗೆಯೊಂದರಲ್ಲಿ ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ Linganamakki ಹಿನ್ನೀರಿ ಸೇರಿದಂತೆ ರಾಜ್ಯ ಒಂಬತ್ತು ಕಡೆಗಳಲ್ಲಿ ವಾಟರ್ ಏರೋಡ್ರೋಮ್ Water Erodrum ಸ್ಥಾಪನೆಗೆ ಸರ್ಕಾರ ಮುಂದಾಗಿದೆ.
ಕರ್ನಾಟಕಕ್ಕೆ ಸಮಗ್ರ ನಾಗರಿಕ ವಿಮಾನಯಾನ ನೀತಿಯನ್ನು ರೂಪಿಸಲು ರಾಜ್ಯಮಟ್ಟದ ಸಮಾಲೋಚನಾ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು ಸಚಿವ ವಿ. ಸೋಮಣ್ಣ, ರಾಜ್ಯದ ಆರ್ಥಿಕತೆಯನ್ನು ಹೆಚ್ಚಿಸಲು ದೃಢವಾದ ನಾಗರಿಕ ವಿಮಾನಯಾನ ವ್ಯವಸ್ಥೆಯನ್ನು ಸ್ಥಾಪಿಸಲು ಬಿಜೆಪಿ ಸರ್ಕಾರವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದು, ಇದಕ್ಕಾಗಿ ರಾಜ್ಯದಲ್ಲಿ ಒಂಬತ್ತು ಏರೋಡ್ರೋಮ್’ಗಳನ್ನು ಸ್ಥಾಪನೆ ಮಾಡುವ ಯೋಜನೆಗೆ ಚಿಂತೆನ ನಡೆದಿದೆ ಎಂದರು.
ಕೆಆರ್’ಎಸ್, ಕಾಳಿ ನದಿ, ಬೈಂದೂರು, ಮಲ್ಪೆ, ಮಂಗಳೂರು, ತುಂಗಭದ್ರಾ, ಲಿಂಗನಮಕ್ಕಿ, ಆಲಮಟ್ಟಿ ಮತ್ತು ಹಿಡಕಲ್ ಜಲಾಶನ ಪ್ರದೇಶಗಳಲ್ಲಿ ವಾಟರ್ ಏರೋಡ್ರೋಮ್ ಸ್ಥಾಪನೆಗೆ ಸಂಭಾವ್ಯ ಸ್ಥಳಗಳನ್ನಾಗಿ ಗುರುತಿಸಲಾಗಿದೆ.
ಏನಿದು ವಾಟರ್ ಏರೋಡ್ರೋಮ್?
ವಾಟರ್ ಏರೋಡ್ರೋಮ್ ಜಲಾಶಯ ಸೇರಿದಂತೆ ಅಪಾರ ಪ್ರಮಾಣದ ನೀರು ಇರುವ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಸ್ಥಾಪನೆ ಮಾಡಲಾಗುತ್ತದೆ. ಸೀ ಪ್ಲೇನ್, ಉಭಯಚರ ವಿಮಾನಗಳನ್ನು ಟೇಕಾಫ್ ಹಾಗೂ ಲ್ಯಾಂಡಿಂಗ್ ಮಾಡಲು ಅನುಕೂಲವಾಗುತ್ತದೆ. ಭೂ ಆಧಾರಿತ ವಿಮಾನ ನಿಲ್ದಾಣಗಳಿಗೆ ಹೋಲಿಸಿದರೆ ಇವುಗಳನ್ನು ಕಡಿಮೆ ವೆಚ್ಚ ಮತ್ತು ಸಮಯದಲ್ಲಿ ನಿರ್ಮಿಸಬಹುದಾಗಿದೆ. ಇದಕ್ಕೆ ಭೂಮಿಯ ಮೇಲೆ ನಿರ್ಮಿಸುವ ರನ್ ವೇ ಅಗತ್ಯವಿರುವುದಿಲ್ಲ.
Also read: ಅಪ್ಪು ಫ್ಯಾನ್ಸ್’ಗೆ ಗುಡ್ ನ್ಯೂಸ್: ಅ.28ರಂದು ತೆರೆಗೆ ಬರಲಿದೆ ಪುನೀತ್ ಕನಸಿನ ಗಂಧದ ಗುಡಿ
ಇಲ್ಲಿ ಬಳಸುವ ವಿಮಾನಗಳು ಸ್ಥಳೀಯ ದೋಣಿಗಳಿಗಿಂತ ವೇಗವಾಗಿ, ಹೆಚ್ಚು ಸುರಕ್ಷಿತವಾಗಿ ಜನರನ್ನು ನೀರಿನಲ್ಲಿ ಕರೆದೊಯ್ಯುಲು ಸಾಧ್ಯವಿದೆ. ಅಲ್ಲದೇ, ದಟ್ಟಣೆಯ ಪ್ರಮಾಣವನ್ನು ಅವಲಂಬಿಸಿ, ನೀರಿನ ಏರೋಡ್ರೋಮ್’ಗಳು ತೀರದಲ್ಲಿ ಅಥವಾ ವಿಮಾನಗಳು ಡಾಕ್ ಮಾಡಬಹುದಾದ ಜೆಟ್ಟಿಯಲ್ಲಿ ಟರ್ಮಿನಲ್ ಕಟ್ಟಡವನ್ನು ಹೊಂದಿರುತ್ತದೆ.
ಪ್ರಸ್ತುತ, ದೇಶದಲ್ಲಿ ಸರ್ದಾರ್ ಸರೋವರ ಅಣೆಕಟ್ಟೆ (ಏಕತೆಯ ಪ್ರತಿಮೆ) ಮತ್ತು ಗುಜರಾತ್’ನ ಅಹಮದಾಬಾದ್ ಸಬರಮತಿ ರಿವರ್ಫ್ರಂಟ್’ನಲ್ಲಿ ಚಾಲ್ತಿಯಲ್ಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post