ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರಧಾನಿ ನರೇಂದ್ರ ಮೋದಿ, PMNarendraModi ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ JPNadda ಹಾಗೂ ಅಮಿತ್ ಶಾ AmithShah ಅವರುಗಳು ಆಶೀರ್ವಾದ ಮಾಡಿ ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ ಎಂದರು.
ನೂತನ ಅಧ್ಯಕ್ಷ ವಿಜಯೇಂದ್ರ ಅವರಿಗೆ ಅಧಿಕಾರ ಹಸ್ತಾಂತರಿಸಿದ ನಂತರ ಅವರು ಮಾತನಾಡಿದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ ಗೆಲ್ಲಲು ನಾವೆಲ್ಲರೂ ಶ್ರಮಿಸುತ್ತೇವೆ. ಯಡಿಯೂರಪ್ಪ Yadiyurappa ಅವರು ಸಿಎಂ ಆಗಿದ್ದಾಗ ನಾನು ಕಿರಿಯನಾಗಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆದೆ. ಬಸವರಾಜ್ ಬೊಮ್ಮಾಯಿ, Basavaraja Bommai ಯಯೂರಪ್ಪ, ಗೋವಿಂದ ಕಾರಜೋಳ, ಕೆ.ಎಸ್. ಈಶ್ವರಪ್ಪ KSEshwarappa ಸೇರಿದಂತೆ ಪಕ್ಷದ ಹಿರಿಯ ನಾಯಕರು ರಾಜ್ಯಾಧ್ಯಕ್ಷರಾಗಿದ್ದ ನನಗೆ ಸಹಕಾರ ನೀಡಿದ್ದಾರೆ. ರಾಜ್ಯದ ಮೂಲೆ ಮೂಲೆಗಳಲ್ಲಿಯೂ ಓಡಾಡಿದ್ದೇನೆ ಎಂದರು.
ಎಲ್ಲಾ ಹಿರಿಯರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದ್ದೇನೆ. ಅತಿ ಹೆಚ್ಚು ಪ್ರಕೋಷ್ಠಗಳನ್ನ ನಾವು ಮಾಡಿದ್ದೇವೆ. ಮತಗಟ್ಟೆ ಅಧ್ಯಕ್ಷನ ಮನೆಗೆ ಫಲಕ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಮಾಡಿದ್ದೇವೆ. ನನಗೆ ನೀಡಿದಂತೆ ಮಾರ್ಗದರ್ಶನ, ಸಹಕಾರ ನೀಡಿದಂತೆ ವಿಜಯೇಂದ್ರ ಅವರಿಗೂ ನೀಡಬೇಕು. ಸಾಮೂಹಿಕವಾಗಿ ಮುನ್ನಡೆಯುವ ಜವಾಬ್ದಾರಿ ವಿಜಯೇಂದ್ರ ಅವರ ಮೇಲಿದೆ ಎಂದರು.
ವಿಜಯೇಂದ್ರ ಸಂಘಟನೆ ಮಾತ್ರವಲ್ಲ, ಹೋರಾಟ ಮಾಡಿದ್ದು, ಅವರೊಬ್ಬ ಅತ್ಯುತ್ತಮ ಸಂಘಟಕ. ರಾಜ್ಯ ಉಪಾಧ್ಯಕ್ಷರಾಗಿ ರಾಜ್ಯ ಪ್ರವಾಸ ಮಾಡಿರುವ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿದ್ದಾರೆ. ಪ್ರತಿಯೊಂದು ಹಂತದಲ್ಲಿಯೂ ಜೊತೆಗಿರುತ್ತೇವೆ. ಸಹಕಾರ ನೀಡುತ್ತೇವೆ ಎಂದರು.
Also read: JMA Calls for Equal Rights for Online Journalists
ಲೋಕಸಭೆ ಚುನಾವಣೆಯಲ್ಲಿ Parliament Election ಎಲ್ಲಾ ಕ್ಷೇತ್ರಗಳಲ್ಲಿಯೂ ಗೆಲ್ಲಲು ಶ್ರಮಿಸೋಣ. ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ಅವರ ಆಶೀರ್ವಾದದಿಂದ ಕೆಲಸ ಮಾಡೋಣ. ಯಡಿಯೂರಪ್ಪರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಿದ ತೃಪ್ತಿ ನನಗಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post