ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಆಧುನಿಕ ತಂತ್ರಜ್ಞಾನ ದೊಂದಿಗಿನ ಸಮಗ್ರ ಬೇಸಾಯ ಅಳವಡಿಕೆ ಸುಸ್ಥಿರ ಹಾಗೂ ಲಾಭದಾಯಕ ಕೃಷಿಗೆ ದಾರಿಯಾಗಿದೆ ರೈತರು ಈ ನಿಟ್ಟಿನಲ್ಲಿ ಗಮನ ಹರಿಸುವ ಅಗತ್ಯವಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ #Minister chaluvarayaswamy ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ #Bangalore Agriculture University ವತಿಯಿಂದ ಜಿ.ಕೆ.ವಿ.ಕೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಮೂರು ದಿನಗಳ ಕೃಷಿ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ರೈತರು ಕೃಷಿ ವಿಶ್ವವಿದ್ಯಾಲಯಗಳು ನಡೆಸುವ ಸಂಶೋಧನೆಗಳು ಹಾಗೂ ತಂತ್ರಜ್ಞಾನಗಳನ್ನು ಬಳಸಿ ಮಿಶ್ರ ಬೇಸಾಯ ಪದ್ದತಿ ಮಾಡಿದರೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಪಡೆಯಲು ಸಾಧ್ಯ ಎಂದರು.

ಆಹಾರ ಉತ್ಪಾದನೆ ಹೆಚ್ಚಳದಲ್ಲಿ ಕೃಷಿ ವಿಶ್ವವಿದ್ಯಾನಿಲಯಗಳ ಸಂಶೋಧನೆಗಳ ಪಾತ್ರವೂ ಮಹತ್ವದಾಗಿದೆ. ವಿವಿಗಳು ನಿರಂತರವಾಗಿ ಹೊಸ ತಳಿಗಳನ್ನು ಸಂಶೋಧಿಸಿ ಬಿಡುಗಡೆ ಮಾಡುತ್ತಿದ್ದು ಕಡಿಮೆ ನೀರು ಹಾಗೂ ವೆಚ್ಚದಲ್ಲಿ ಹೆಚ್ಚು ಇಳುವರಿ ಪಡೆಯಬಹುದಾಗಿದೆ ರೈತರು ಇವುಗಳ ಲಾಭ ಪಡೆಯಬೇಕು ಎಂದು ಕರೆ ನೀಡಿದರು.
ಈ ಸಾರಿ “ಹವಾಮಾನ ಚತುರ ಡಿಜಿಟಲ್ ಕೃಷಿ” ಎಂಬ ಘೋಷವಾಕ್ಯದೊಂದಿಗೆ ಈ ಮೇಳವನ್ನು ಆಯೋಜಿಸುತ್ತಿರುವುದು ಕೃಷಿ ಕ್ಷೇತ್ರದ ಸಕಾಲಿಕ ಚಿಂತನೆಯಾಗಿ ಎದ್ದು ಕಾಣುತ್ತಿದೆ. ರೈತ ಕುಟುಂಬಗಳಿಗೆ ಇದೊಂದು ಒಳ್ಳೆಯ ಅವಕಾಶವಾಗಿದೆ. ರೈತರುತಮ್ಮ ಶ್ರಮ ಮತ್ತು ಚಿಂತನೆಯಿಂದ ಆರ್ಥಿಕವಾಗಿ ಸಬಲರಾಗಲು ಒಂದು ಒಳ್ಳೆ ಅವಕಾಶವನ್ನು ಕಲ್ಪಿಸಿದೆ ಎಂದು ಹೇಳಿದರು.
Also read: ಮಕ್ಕಳ ಭವಿಷ್ಯ ಉತ್ತಮವಾಗಲು ಸೂಕ್ತ ಮಾರ್ಗದರ್ಶನ ಅಗತ್ಯ: ತಹಶೀಲ್ದಾರ್ ಪ್ರದೀಪ್

ಕೃಷಿ ಮೇಳದ ವ್ಯವಸ್ಥೆ ಶ್ಲಾಘಿಸಿದ ಸಚಿವರು ಕೃಷಿ ಪದವಿದರರು ಸ್ವಯಂ ಉದ್ಯೋಗ ಅಳವಡಿಸಿಕೊಂಡು ಇತರರಿಗೆ ಉದ್ಯೋಗ ಹಾಗೂ ಮಾರ್ಗದರ್ಶನ ನೀಡಬೇಕು ಎಂದರು.
ಪ್ರಾತ್ಯಕ್ಷಿಕೆ ತಾಕು ಪರಿಶೀಲನೆ: ಟ್ರಾಕ್ಟರ್ ಮೂಲಕ ಔಷಧಿ ಸಿಂಪಡಣೆ
ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿರವರು ಜಿ.ಕೆ.ವಿ.ಕೆ ವತಿಯಿಂದ ಪರೀಕ್ಷಾ ಬೆಳೆಯಲಾಗಿರುವ ವಿವಿಧ ಬೆಳೆಗಳ ಪ್ರಾತ್ಯಕ್ಷಿಕೆ ತಾಕುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು ನಂತರ ಅತ್ಯಾಧುನಿಕ ಸ್ವಯಂಚಾಲಿತ ಯಂತ್ರಗಳನ್ನು ಒಳಗೊಂಡ ಔಷಧಿ ಸಿಂಪಡಣಾ ಟ್ರಾಕ್ಟರ್ ಕೂಡ ಚಾಲನೆ ನೀಡಿದರು. ಶಾಸಕರಾದ ಎಸ್.ಆರ್.ವಿಶ್ವನಾಥ್ ಹಾಗೂ ಶರತ್ ಬಚ್ಚೇಗೌಡ, ಬೆಂಗಳೂರು ಕೃಷಿ ವಿ.ವಿ ಉಪ ಕುಲಪತಿ ಸುರೇಶ್ ಅವರು ಸಹ ಸಚಿವರೊಂದಿಗೆ ಟ್ರಾಕ್ಟರ್‌ನಲ್ಲಿ ಕುಳಿತಿದ್ದು ವಿಶೇಷವಾಗಿತ್ತು.
650 ಮಳಿಗೆ
ಕೃಷಿಮೇಳದ ಬೃಹತ್ ಜನಾಕರ್ಷಣೆ: ಅಚ್ಚುಕಟ್ಟಾದ ಹಾಗೂ ವಿಶಾಲ ಜಾಗದಲ್ಲಿ ನಡೆಯುವ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕೃಷಿಮೇಳ ದೇಶದಲ್ಲೇ ಹೆಸರುವಾಸಿಯಾಗಿದೆ. ಈ ಭಾರಿ ಸುಮಾರು 650 ಮಳಿಗೆಗಳನ್ನು ತೆರೆಯಲಾಗಿದ್ದು ಹೊಸ ಹೊಸ ತಂತ್ರಜ್ಞಾನಗಳು, ತಳಿಗಳ ಪ್ರದರ್ಶನ ಮತ್ತು ಮಾರಾಟ ಮೇಳ ಲಕ್ಷಾಂತರ ಜನರನ್ನು ಆಕರ್ಷಿಸುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post