ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ತನ್ನ ಉತ್ಕೃಷ್ಟ ಗುಣಮಟ್ಟ ಮತ್ತು ರುಚಿಗೆ ಹೆಸರುವಾಸಿಯಾಗಿರುವ ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಈಗ ಪ್ರೋಟೀನ್’ಯುಕ್ತ ಇಡ್ಲಿ ಹಾಗೂ ದೋಸೆ ಹಿಟ್ಟಿನ #Nandini Dosa/Idly batter ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.
ಆರಂಭಿಕ ಹಂತದಲ್ಲಿ ಬೆಂಗಳೂರು ನಗರದಲ್ಲಿ ಪ್ರಾಯೋಗಿಕವಾಗಿ ಈ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ.
Also read: ಗಮನಿಸಿ! ಜ.1ರ ನಾಳೆಯಿಂದ ಶಿವಮೊಗ್ಗದ ಈ ರೈಲುಗಳ ಸಂಚಾರ ಸಮಯದಲ್ಲಿ ಬದಲಾಗಲಿದೆ
ಬದಲಾದ ಜೀವನಶೈಲಿಯಿಂದಾಗಿ ನಗರ ಪ್ರದೇಶಗಳ ಜನರು ಹೆಚ್ಚೆಚ್ಚು ಸಿದ್ಧಪಡಿಸಲಾದ ಆಹಾರ ಉತ್ಪನ್ನಗಳ ಮೊರೆ ಹೋಗುತ್ತಿರುವುದನ್ನು ಮನಗಂಡು, ಆರೋಗ್ಯಕರವಾದ ಹಾಗೂ ರುಚಿಕರವಾದ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಗ್ರಾಹಕರಿಗೆ ಒದಗಿಸಲು ನಿರ್ಧರಿಸಿ, ಈ ನೂತನ ಉತ್ಪನ್ನವನ್ನು ಪರಿಚಯಿಸಲಾಗಿದೆ.
ಬೆಂಗಳೂರು ನಗರದಲ್ಲಿ ಪ್ರಾಯೋಗಿಕವಾಗಿ ನಂದಿನಿ ಬ್ರಾಂಡ್’ನ ಇಡ್ಲಿ/ದೋಸೆ ಹಿಟ್ಟನ್ನು ಎರಡು ವಿಧದ ಪ್ಯಾಕ್’ಗಳಲ್ಲಿ ಅಂದರೆ 450 ಗ್ರಾಂ.ಗೆ 40 ಹಾಗೂ 900 ಗ್ರಾಂ.ಗೆ 80 ರೂ.ನಂತೆ ಮಾರಾಟ ದರ ನಿಗದಿಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
ನಂದಿನಿಯ ಈ ಹೊಸ ಪ್ರಯತ್ನಕ್ಕೆ ಎಂದಿನಂತೆ ಸಾರ್ವಜನಿಕರ ಬೆಂಬಲವನ್ನು ಸಂಸ್ಥೆ ಕೋರಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post