ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ರಾಜಧಾನಿಯಲ್ಲಿ ನಿನ್ನೆ ಬಂಧಿತರಾದ ಶಂಕಿತ ಭಯೋತ್ಪಾದಕರ ಟಾರ್ಗೆಟ್ ಬೆಂಗಳೂರಿನ Terrorist Target in Bangalore ಪ್ರಮುಖ ಜನನಿಬಿಡ ಪ್ರದೇಶಗಳೇ ಆಗಿದ್ದವು ಎಂಬ ಆತಂಕಕಾರಿ ಮಾಹಿತಿ ವರದಿಯಾಗಿದೆ.
ಮೂಲಗಳ ಮಾಹಿತಿಯಂತೆ, ಬಂಧಿತ ಐವರು ಎಲ್’ಇಟಿ ಉಗ್ರರು ಎಂದು ಹೇಳಲಾಗಿದ್ದು, ಜನನಿಬಿಡ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡು ಭಾರೀ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ.

ಮೂಲಗಳ ಮಾಹಿತಿಯಂತೆ ಬೆಂಗಳೂರಿನ ಮೆಜೆಸ್ಟಿಕ್, ಬಿಎಂಟಿಸಿ ಬಸ್’ಗಳು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಎಂ ಜಿ ರಸ್ತೆ, ಮೆಟ್ರೋ ನಿಲ್ದಾಣಗಳು, ಪ್ರಮುಖ ಮಾಲ್’ಗಳಲ್ಲಿ ಭಾರೀ ಪ್ರಮಾಣದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದರು ಎಂದು ಹೇಳಲಾಗಿದೆ.
Also read: ಚರ್ಚ್ ಫಾದರ್ ವಿರುದ್ಧ ಪೊಕ್ಸೋ ಕಾಯ್ದೆಯಡಿ ಪ್ರಕರಣ: ಪೊಲೀಸರ ವಶಕ್ಕೆ ಪಾದ್ರಿ
ಸುಲ್ತಾನ್ ಪಾಳ್ಯದಲ್ಲಿ ನಿನ್ನೆ ಬಂಧಿತರಾದ ಶಂಕಿತ ಉಗ್ರರ ಪೈಕಿ ಸುಹೇಲ್ ಎಂಬುವವನ ಮನೆಯಲ್ಲಿ ಪಿಸ್ತೂಲು ಸೇರಿದಂತೆ ಸ್ಪೋಟಕ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದರು. ರಾತ್ರಿ ವೇಳೆಯಲ್ಲಿ ಸಭೆ ನಡೆಸಿ ಕೃತ್ಯ ಎಸಗುವ ಕುರಿತಾಗಿ ಸಂಚು ರೂಪಿಸುತ್ತಿದ್ದರು ಎನ್ನಲಾಗಿದೆ.

ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಸ್ಪೋಟಕ್ಕೆ ಸಂಚು ರೂಪಿಸಲಾಗುತ್ತಿದೆ ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ದೊರೆತಿತ್ತು. ಇದರ ಬೆನ್ನಲ್ಲೇ ಅಲರ್ಟ್ ಆದ ಪೊಲೀಸರು ಶಂಕಿತರ ಲೊಕೇಶನ್ ಟ್ರೇಸ್ ಮಾಡಿ ಬಲೆ ಬೀಸಿದ್ದರು.
ಮಾಹಿತಿ ಖಚಿತಗೊಂಡ ಹಿನ್ನೆಲೆಯಲ್ಲಿ ಕನಕನಗರದ ಸುಲ್ತಾನ್ ಪಾಳ್ಯದ ಮಸೀದಿ ಬಳಿಯಲ್ಲಿ ಶಂಕಿತರ ಮೀಟಿಂಗ್ ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ್ದಾರೆ. ದಾಳಿ ವೇಳೆಯಲ್ಲಿ ಸಯ್ಯದ್ ಸುಹೇಲ್, ಉಮರ್, ಜುನೇದ್ ಮುದಾಶೀರ್, ಜಾಹಿದ್ ಬಂಧಿತ ಎನ್ನುವವರನ್ನು ಬಂಧಿಸಲಾಗಿದೆ.
2017 ರಲ್ಲಿ ಆರ್’ಟಿ ನಗರದ ನೂರ್ ಕೊಲೆ ಕೇಸಿನಲ್ಲಿ ಬಂಧಿತರ ಪೈಕಿ ಐವರಿಗೆ ಟೆರರ್ ಲಿಂಕ್ ಇದೆ ಎಂಬ ಮಾಹಿತಿ ಸಿಕ್ಕಿದೆ. ಸುಹೈಲ್, ಉಮರ್, ತಬ್ರೇಜ್, ಮುದಾಸಿರ್, ಫೈಜಲ್’ಜಬ್ಬಾನಿಗೆ ಟೆರರ್ ಲಿಂಕ್ ಇದೆ ಎಂಬ ಆಕಂಕಕಾರಿ ಮಾಹಿತಿಯೂ ಸಹ ಹೊರಬಿದ್ದಿದೆ. ಅಲ್ಲದೇ ಇವರಿಗೆ 2008ರ ಬೆಂಗಳೂರು ಸೀರಿಯಲ್ ಬ್ಲಾಸ್ಟ್ ಕೇಸ್ ರೂವಾರಿ ಜುನೈದ್ ಪರಿಚಯವಾಗಿದೆ ಎನ್ನಲಾಗಿದ್ದು, ಜುನೈದ್ ಮೂಲಕ ಸ್ಫೋಟಕ್ಕೆ ಈ ಐವರು ಸಂಚು ಹೂಡಿದ್ದಾರೆ ಎನ್ನಲಾಗಿದೆ.

ಸಿಸಿಬಿ ಹಾಗೂ ಕೇಂದ್ರ ಗುಪ್ತಚರ ಇಲಾಖೆ ಕಾರ್ಯಾಚರಣೆ ವೇಳೆ 7 ನಾಡ ಪಿಸ್ತೂಲ್, 42 ಜೀವಂತ ಗುಂಡುಗಳು, 2 ಸ್ಯಾಟಲೈಟ್ ಫೋನ್ ಮಾದರಿಯ ವಾಕಿಟಾಕಿ, ಮೊಬೈಲ್ ಫೋನ್, ವಿವಿಧ ಕಂಪನಿ ಸಿಮ್’ಗಳು, ಲ್ಯಾಪ್ ಟಾಪ್ ಸೀಜ್ ಮಾಡಲಾಗಿದೆ ಎಂದು ಹೇಳಲಾಗಿದ್ದು, ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.










Discussion about this post