ಕಲ್ಪ ಮೀಡಿಯಾ ಹೌಸ್ | ಬೆಂಗಳೂರು , ವೈಟ್ ಪೀಲ್ದ್ |
ಇತ್ತೀಚೆಗೆ ಮೈಕೋಪ್ಲಾಸ್ಮಾ ನ್ಯೂಮೊನಿಯೆ ಸೋಂಕು #Mycoplasma pneumoniae Infection ಮಕ್ಕಳಲ್ಲಿ ಜಾಸ್ತಿಯಾಗುತ್ತಾ ಇದೆ. ಇದು ಶ್ವಾಸಕೋಶಕ್ಕೆ ತಗಲುವ ಸೋಂಕಿನಿಂದ ಶುರುವಾಗುತ್ತದೆ. ವೈಟ್ ಫೀಲ್ದ್ ನಲ್ಲಿರುವ ಮೆಡಿಕವರ್ ಆಸ್ಪತ್ರೆಯಲ್ಲಿ ಇಬ್ಬರು ಮಕ್ಕಳಲ್ಲಿ ಕಾಡುತ್ತಾ ಇದ್ದ ಸಮಸ್ಗಗೆ ಮಕ್ಕಳ ತಜ್ಞ ಡಾ. ಆನಂದ್ ಪಾಟೀಲ್ ಸೂಕ್ತ ಚಿಕಿತ್ಸೆ ನೀಡಿ ಗುಣಮುಖ ಮಾಡಿದ್ದಾರೆ.
ಈ ಸೋಂಕಿನ ಪ್ರಮುಖ ರೋಗ ಲಕ್ಷಣಗಳು ಅಂದರೆ ಸುಮಾರು ದಿನಗಳ ಕಾಲ ಮಕ್ಕಳಲ್ಲಿ ಜ್ವರ, ತೀವ್ರ ಶೀತ ಮತ್ತು ಕೆಮ್ಮು ಕಾಣಿಸಿಕೊಳ್ಳುತ್ತದೆ. ಬಳಿಕ ಉಸಿರಾಟದ ತೊಂದರೆ, ದೇಹದ ಉಷ್ಣತಾಪ ಹೆಚ್ಚಾಗಿ ಎದೆನೋವು ಕಾಣಿಸಿಕೊಳ್ಳುತ್ತದೆ. ಹಾಗೂ ಬಾಯಿಯಲ್ಲಿ ದೊಡ್ಡ ದೊಡ್ಡ ಗಾಯವಾಗಿ ರಕ್ತಸ್ರಾವವಾಗುತ್ತದೆ. ಇದೇ ರೀತಿ ಸಮಸ್ಯೆಯನ್ನು ಎದುರಿಸಿದ ಇಬ್ಬರು ಮಕ್ಕಳು ಮೆಡಿಕವರ್ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿದೆ.

ಇನ್ನೂ 3 ವರ್ಷದ ಮಗುವಿಗೂ ಕೂಡ ಈ ಸೋಂಕು ತಗಲಿತ್ತು. ಮಗುವಿಗೆ ಉಸಿರಾಟದ ತೊಂದರೆ, ಕೆಮ್ಮು ಮತ್ತು ಜ್ವರ ಸಮಸ್ಯೆಯಿಂದ ಬಳಲುತ್ತಾ ಇದೆ ಎಂದು ಹೆತ್ತವರು ಆಸ್ಪತ್ರೆಗೆ ಕರೆತಂದರು. ದಾಖಲಾತಿಯ ಸಮಯದಲ್ಲಿ ಮಗುವು ತೀವ್ರ ಅಸ್ವಸ್ಥವಾಗಿತ್ತು. ಉಸಿರಾಟದ ತೊಂದರೆ ಹಾಗೂ ಆಕ್ಸಿಜನ್ ಮಟ್ಟ ಕಡಿಮೆಯಾಗಿತ್ತು. ಈ ಮಗುವಿಗೂ ಕೂಡ ಸುಮಾರು ದಿನಳಿಂದ ಜ್ವರ, ತೀವ್ರ ಶೀತ ಮತ್ತು ಕೆಮ್ಮಿನೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಮಗುವಿಗೆ ಉಸಿರಾಟದ ತೊಂದರೆ, ಸತತ ಉಷ್ಣತಾಪ ಮತ್ತು ಎದೆನೋವು ಕೂಡ ಕಾಣಿಸಿಕೊಂಡಿತ್ತು.ಪ್ರಾಥಮಿಕ ಚಿಕಿತ್ಸೆಗಾಗಿ ಆಂಟಿಬಯೋಟಿಕ್ ಔಷಧಗಳನ್ನು ನೀಡಲಾಯಿತಾದರೂ, ಲಕ್ಷಣಗಳು ಉಲ್ಬಣಗೊಂಡ ಕಾರಣ ಹೆಚ್ಚುವರಿ ಆಕ್ಸಿಜನ್‌ನ ವ್ಯವಸ್ಥೆ ಮಾಡಲಾಯಿತು. ಮುಂದುವರಿದ ಪರೀಕ್ಷೆಯಲ್ಲಿ ಮೈಕೊಪ್ಲಾಸ್ಮಾ ನ್ಯೂಮೋನಿಯಾ ಸೋಂಕು ತಗಲಿರೋದು ಅನ್ನೋದು ವೈದ್ಯರು ದೃಢೀಕರಿಸಿದರು. ಬಳಿಕ ಡಾ. ಆನಂದ ಪಾಟೀಲ್ ಅವರ ನೇತ್ರತ್ವದಲ್ಲಿ ಸೂಕ್ತ ಚಿಕಿತ್ಸೆ ನೀಡಿ , ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳಿಸಿಕೊಡಲಾಯಿತು.

- ನಿಧಾನವಾಗಿ ಪ್ರಾರಂಭವಾಗುವ ಲಕ್ಷಣಗಳು
- ಒಣಕೆಮ್ಮು (ಉಷ್ಣತೆ ಕಡಿಮೆಯಾದರೂ ಕೆಮ್ಮು ಸಾಕಷ್ಟು ದಿನಗಳು ಇರಬಹುದು)
- ಗಂಟಲುಕಿರಿತ, ಮೈಕೈ ನೋವು, ತಲೆನೋವು, ದಣಿವು
- ಸ್ವಲ್ಪ ಉಷ್ಣತೆ, ಮೂಗು ಬ್ಲಾಕ್ ಆಗುವುದು
- ಕೆಲವು ವೇಳೆ ಉಸಿರಾಟದ ತೊಂದರೆ ಮತ್ತು ಹೃದಯಭಾಗದಲ್ಲಿ ನೋವು
ಸೋಂಕು ಹರಡುವ ರೀತಿ:
- ಶೀತ, ಕೆಮ್ಮಿನ ಮೂಲಕ ಹಬ್ಬುತ್ತದೆ
- ಪೋಷಣೆಯ ಕೊರತೆ, ಉಸಿರಾಟದ ಸೋಂಕುಗಳ ಇತಿಹಾಸ ಇರುವವರಿಗೆ ಹೆಚ್ಚು ಅಪಾಯ
- 1 ರಿಂದ 4 ವಾರಗಳ ವರೆಗೆ ಗುಪ್ತಾವಧಿ

- ಗಂಭೀರ ನ್ಯುಮೊನಿಯಾ
- ಮೆದುಳಿನ ತೊಂದರೆ
- ಚರ್ಮದಲ್ಲಿ ತುರಿಕೆ
- ರಕ್ತಹೀನತೆ (ಅನೀಮಿಯಾ)
ಮೈಕೋಪ್ಲಾಸ್ಮಾ ನ್ಯೂಮೊನಿಯೆ ಸೋಂಕು ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಕಾರಣ, ಹೆತ್ತವರಾಗಿ ನೀವು ಎಚ್ಚರಿಕೆ ವಹಿಸಲು ಅಗತ್ಯವಿದೆ. ಇದು ಮುಖ್ಯವಾಗಿ ಉಸಿರಾಟದ ಸೋಂಕುಗಳನ್ನುಂಟುಮಾಡುವ ಬ್ಯಾಕ್ಟೀರಿಯಾದಿಂದ ಉಂಟಾಗುವ ರೋಗವಾಗಿದ್ದು, ಮಕ್ಕಳಲ್ಲಿ ಉಸಿರಾಟದ ತೊಂದರೆ, ಜ್ವರ, ಕೆಮ್ಮು ಮತ್ತು ಅಸ್ವಸ್ಥತೆ ಹೆಚ್ಚಿಸುವ ಸಾಧ್ಯತೆ ಇದೆ.

- ಮಕ್ಕಳಲ್ಲಿ ಸ್ವಚ್ಛತೆ ಕಾಪಾಡಿ .
- ಕೈಯನ್ನು ನಿಯಮಿತವಾಗಿ ತೊಳೆಸುವುದು.
- ಶೀತ ಮತ್ತು ಕೆಮ್ಮಿನಿಂದ ಬಳಲುವವರ ಸಂಪರ್ಕದಿಂದ ದೂರ ಇರಿಸಿ.
- ಯಾವುದೇ ಉಸಿರಾಟದ ತೊಂದರೆ ಕಾಣಿಸಿದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.
- ಹಿತಕರ ಆಹಾರ ಮತ್ತು ಸಾಕಷ್ಟು ತ್ಯಾಜ್ಯಪದಾರ್ಥಗಳನ್ನು ಬಳಸುವ ಅಭ್ಯಾಸ ರೂಢಿಸಬೇಕು.
ಸೋಂಕು ತೀವ್ರಗೊಂಡರೆ, ಸೂಕ್ತ ಚಿಕಿತ್ಸೆ ಪಡೆಯುವುದು ಅನಿವಾರ್ಯ. ನಿಮ್ಮ ಮಕ್ಕಳ ಆರೋಗ್ಯವನ್ನು ಸಂರಕ್ಷಿಸಲು, ಈ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ.
ಮೈಕೋಪ್ಲಾಸ್ಮಾ ನ್ಯೂಮೊನಿಯೆ ಸೋಂಕು ತೀವ್ರವಾದ ಶ್ವಾಸಕೋಶ ಮತ್ತು ಮೂಕೋಕುಟೇನಿಯಸ್ ತೊಂದರೆಗಳಿಗೆ ಕಾರಣವಾಗುತ್ತದೆ. ಈ ಸೋಂಕಿನ ಬಗ್ಗೆ ಮುಂದೆ ಏನ್ ಮಾಡಬೇಕು ಎಂದು ವೈದ್ಯರು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಹಾಗೂ ಬೇರೆ ವಿಭಾಗದ ತಜ್ಞರ ನೆರವಿನ ಅಗತ್ಯ ಕೂಡ ಸಾಕಷ್ಟು ಇದೆ. ಹಾಗಾಗೀ ಬೇಗನೆ ರೋಗನಿರ್ಣಯ ಚಿಕಿತ್ಸೆ ನೀಡಬೇಕು . ರೋಗಿಯ ಆದಷ್ಟು ಬೇಗ ಚೇತರಿಕೆಯಾಗೋದಕ್ಕೆ ಸಹಾಯವಾಗುವಂತೆ ಮಾಡಬೇಕೆಂದು ಮಕ್ಕಳ ತಜ್ಞ ಡಾ. ಆನಂದ ಪಾಟೀಲ್ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post