ಕಲ್ಪ ಮೀಡಿಯಾ ಹೌಸ್ | ವೈಟ್ ಫಿಲ್ದ್ , ಬೆಂಗಳೂರು |
ಪಶ್ವಿಮ ಬಂಗಾಳದಲ್ಲಿದ್ದ ಬಾಲಕ ಆಟವಾಡುವಾಗ ತಪ್ಪಿ ಸೀಟಿಯನ್ನು ನುಂಗಿದ ಕಾರಣ, ಅದಕ್ಕೆ ಕೂಡಲೇ ಸರಿಯಾದ ಚಿಕಿತ್ಸೆ ಸಿಗದ ಹಿನ್ನಲೆ, ನ್ಯುಮೋನೀಯಾ ಶುರುವಾಗಿ ಬಾಲಕನ ಜೀವಕ್ಕೆ ಕಂಟಕ್ಕೆ ಎದುರಾಗಿತ್ತು. ಬಳಿಕ ಬೆಂಗಳೂರಿನಲ್ಲಿರುವ ಮೆಡಿಕವರ್ ಆಸ್ಪತ್ರೆಯಲ್ಲಿ #Medicover Hospital ಚಿಕಿತ್ಸೆ ಪಡೆದ ಬಳಿಕ ಬಾಲಕ ಸಂಪೂರ್ಣವಾಗಿ ಗುಣಮುಖವಾಗಿ ಮರಳಿ ತಮ್ಮೂರಿಗೆ ತೆರಳಿದ.
7 ವರ್ಷದ ಬಾಲಕ ಮಾತಾನಾಡುವಾಗ, ಕಿರಿಚಾಡುವಾಗ ಸೀಟಿ ಸೌಂಡ್ ಬರುತ್ತಾ ಇತ್ತು. ಏನಕ್ಕೆ ಹೀಗಾಗುತ್ತಾ ಇದೆ ಎಂದು ಹೆತ್ತವರು ಬಾಲಕನಲ್ಲಿ ಕೇಳಿದಾಗ, ಬಾಲಕ ಆಟವಾಡುತ್ತಾ ಇರುವಾಗ ಸೀಟಿಯನ್ನು ನುಂಗಿರೋದು ತಿಳಿದು ಬಂದಿದೆ. ಸುಮಾರು 2 ಸೆಂಟಿ ಮೀಟರ್ ಉದ್ದದ ಸೀಟಿಯನ್ನು ಬಾಲಕ ನುಂಗಿದ್ದ . ಹಾಗಾಗೀ ಆತನ ಹೆತ್ತವರು ಸ್ವಲ್ಪನೂ ತಡಮಾಡದೇ , ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ತೆರಳಿದರು .ಅಲ್ಲಿ ಸಿಟಿ ಸ್ಕಾನ್ ಮಾಡಿಸಿ, ಬ್ರಾಂಕೋಸ್ಕೊಪಿ ಮೂಲಕ ಸೀಟಿಯನ್ನು ತೆಗೆಯುವ ಪ್ರಯತ್ನ ಮಾಡಿದಾಗ, ಅದು ಶ್ವಾಸನಾಳದಲ್ಲಿ ಗಟ್ಟಿಯಾಗಿ ಸಿಕ್ಕಿ ಹಾಕಿಕೊಂಡಿತ್ತು. ಇದರಿಂದ ಬಾಲಕನಿಗೆ ನ್ಯುಮೋನಿಯಾ ಕೂಡ ಶುರುವಾಗಿತ್ತು

ಸಮಯೋಚಿತ ಮತ್ತು ಆಧುನಿಕ ಚಿಕಿತ್ಸೆಯಿಂದ ಗಂಭೀರ ಸಮಸ್ಯೆಗಳನ್ನು ತಪ್ಪಿಸಲಾಗುತ್ತದೆ ಮತ್ತು ರೋಗಿಯು ಸುರಕ್ಷಿವಾಗಿ ಚೇತರಿಕಯಾಗಲು ಅನುಕೂಲವಾಗುತ್ತದೆ. ಕ್ರಯೋಯಂಥ ಆಧುನಿಕ ತಂತ್ರಜ್ಞಾನದ ಮೂಲಕ ಈಗ ಇಂತಹ ಸಮಸ್ಯೆಗಳಿಗೆ ಬೇಗ ಪರಿಹಾರ ಹುಡುಕೋದಕ್ಕೆ ಅನುಕೂಲವಾಗುತ್ತದೆ ಎಂದು ಶ್ವಾಸಕೋಶತಜ್ಞ ಡಾ. ಮಂಜುನಾಥ್ ಬಿಜಿ ಅಭಿಪ್ರಾಯಪಟ್ಟಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post