ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬಿಜೆಪಿಯಲ್ಲಿ ನನ್ನನ್ನು ನಡೆಸಿಕೊಂಡು ರೀತಿಯಿಂದ ಬೇಸತ್ತು ಹೊರಬಂದು, ಸಂತೋಷದಿAದ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ Jagadish Shettar ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡ ವೇಳೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವುದರಲ್ಲಿ ನಾನು ಪ್ರಮುಖವಾದವನು. ಜನಸಂಘ, ಸಂಘ ಪರಿವಾರದಿಂದ ನಾನು ಬಿಜೆಪಿಗಾಗಿ ಹಗಲಿರುಳು ದುಡಿದಿದ್ದೇನೆ. ಆದರೆ, ಬಿಜೆಪಿಯಲ್ಲಿ ಕೆಲವು ತಿಂಗಳಿನಿಂದ ನಾನು ಅನುಭವಿಸಿದ ವೇದನೆ ಯಾವುದೇ ಹಿರಿಯ ನಾಯಕರ ಗಮನಕ್ಕೆ ಬರಲಿಲ್ಲ ಎಂದು ಮನದಾಳದ ನೋವನ್ನು ತೋಡಿಕೊಂಡರು.

Also read: ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್’ಗೆ ಈಶ್ವರಪ್ಪ ಬರೆದ ಬಹಿರಂಗ ಪತ್ರದಲ್ಲೇನಿದೆ?












Discussion about this post