ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಒಂದೆಡೆ ಕೋವಿಡ್-19 ಸೋಂಕಿನಿಂದಾಗಿ ಸಾಯುತ್ತಿರುವ ಜನರ ಸಂಸ್ಕಾರಕ್ಕೆ ಸಾಲುಗಟ್ಟಿ ಕಾಯಬೇಕಾದ ಸ್ಥಿತಿಯಿರುವ ಬೆನ್ನಲ್ಲೇ ವಿಲ್ಸನ್ ಗಾರ್ಡನ್ ಚಿತಾಗಾರವನ್ನು 8 ದಿನಗಳ ಕಾಲ ಮುಚ್ಚಲಾಗಿದೆ.
ಈ ಕುರಿತಂತೆ ಬಿಬಿಎಂಪಿ ಮಾಹಿತಿ ಪ್ರಕಟಿಸಿದ್ದು, ಇಂದಿನಿಂದ ಮೇ 27ರವರೆಗೂ ಚಿತಾಗಾರದಲ್ಲಿ ಶವಸಂಸ್ಕಾರಕ್ಕೆ ಅವಕಾಶವಿಲ್ಲ ಎಂದು ತಿಳಿಸಿದೆ.
ನಗರದಲ್ಲಿ ಕೋವಿಡ್19 ಸೋಂಕಿನಿಂದ ಸಾಯುತ್ತಿರುವವರ ಸಂಖ್ಯೆ ಅಧಿಕವಾಗಿರುವ ಹಿನ್ನೆಲೆಯಲ್ಲಿ ನಿರಂತರವಾಗಿ ಶವ ಸಂಸ್ಕಾರ ಮಾಡಿ ಇಲ್ಲಿರುವ ಕುಲುಮೆ ಹಾನಿಯಾಗಿದೆ. ಇದನ್ನು ಸರಿಪಡಿಸುವ ಕಾರ್ಯ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ 8 ದಿನಗಳ ಕಾಲ ಚಿತಾಗಾರವನ್ನು ಮುಚ್ಚಲಾಗಿದೆ ಎಂದು ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post