ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಇಳಿಕೆಯಾಗುತ್ತಿದೆ, ಈ ಸಂದರ್ಭದಲ್ಲಿ ಈಗ ಜಾರಿಯಲ್ಲಿರುವ ಕಠಿಣ ಕರ್ಫ್ಯೂವನ್ನು ಜೂನ್ 7 ಕ್ಕೆ ಅಂತ್ಯಗೊಳಿಸಬೇಕೇ ಅಥವಾ ಮತ್ತೆ ಮುಂದುವರೆಯಲಿದೆಯೇ? ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ.
ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 5ಕ್ಕಿಂತ ಕಡಿಮೆಯಾದರೆ ಕರ್ಫ್ಯೂ ನಿಯಮ ಸಡಿಲಿಸಬಹುದು ಎಂದು ತಜ್ಞರ ಸಮಿತಿ ಸಲಹೆ ನೀಡಿದೆ. ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದರೂ ಜೂನ್ ಆರರ ಹೊತ್ತಿಗೆ ಶೇ. 5ಕ್ಕೆ ಇಳಿಯುವುದೇ ಎಂಬ ಕುತೂಹಲವೂ ಜೋರಾಗಿದೆ.
ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದ್ದರೂ ಏಳು ಜಿಲ್ಲೆಗಳಲ್ಲಿ ಪರಿಸ್ಥಿತಿ ಗಂಭೀರವಿದೆ.ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.12.30ರಷ್ಟಿದ್ದು, ಕರ್ಫ್ಯೂ ಅವಧಿ ಮುಕ್ತಾಯಗೊಳ್ಳುವ ಸಮಯಕ್ಕೆ ಪಾಸಿಟಿವಿಟಿ ದರ ಕಡಿಮೆಯಾಗಲಿದೆಯೇ ಎಂದು ಕಾದುನೋಡಬೇಕಾಗಿದೆ.
ಲಾಕ್‌ಡೌನ್ ನಿಯಮಗಳನ್ನು ಒಮ್ಮೆಲೇ ಸಡಿಲಿಸಿದರೆ ಜನಸಂಚಾರ ಹೆಚ್ಚಳಗೊಂಡು ಸೋಂಕಿನ ಪ್ರಕರಣಗಳು ಪುನಃ ಹೆಚ್ಚಬಹುದು. ತಜ್ಞರ ವರದಿ ಆಧರಿಸಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಸಭೆಯನ್ನು ಬುಧವಾರ ಸಂಜೆ ಕರೆದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post