ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನನ್ನ ಚಿಕ್ಕಪ್ಪ ತಮ್ಮ ಅವಧಿಯಲ್ಲಿ ಮಾಡಿರುವ ಜನಪರ, ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸುವ ಸಲುವಾಗಿ ಕೊರಿಯರ್ ಗರ್ಲ್ ಆಗಿ ಪ್ರಚಾರ ಮಾಡಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ #D K Shivakumar doughter Aishwarya ಹೇಳಿದ್ದಾರೆ.
ಮತದಾನದ ಬಳಿಯ ಮಾತನಾಡಿದ ಅವರು, ನನ್ನ ಚಿಕ್ಕಪ್ಪ ಒಬ್ಬ ಸಂಸದರಾಗಿ ಮಾಡಿರುವ ಕೆಲಸಗಳ ಬಗ್ಗೆ ನನಗೆ ಹೆಮ್ಮೆಯಿದೆ. ಓರ್ವ ವಿದ್ಯಾವಂತಳಾಗಿ ಈ ವಿಚಾರಗಳನ್ನು ಜನರಿಗೆ ತಿಳಿಸುವುದು ನನ್ನ ಕರ್ತವ್ಯವಾಗಿದೆ. ಹೀಗಾಗಿ, ಕೊರಿಯರ್ ಗರ್ಲ್ ಆಗಿ ಕೆಲಸ ಮಾಡಿದ್ದೇನೆ. ನನ್ನ ಕೆಲಸಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ನನ್ನ ಚಿಕ್ಕಪ್ಪನ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Also read: ಆದಷ್ಟು ಬೇಗ ಶಿವಮೊಗ್ಗಕ್ಕೆ ರಾಹುಲ್ ಗಾಂಧಿ ಬರಲಿ: ಈಶ್ವರಪ್ಪ ಹೀಗೆ ಹೇಳಿದ್ದೇಕೆ?
ನಮ್ಮ ಕ್ಷೇತ್ರದ ಅಪಾರ್ಟ್’ಮೆಂಟ್’ಗಳಲ್ಲಿ ಇರುವವರು ತಮ್ಮ ಒತ್ತಡದ ಕೆಲಸ ಕಾರ್ಯಗಳಲ್ಲಿ ತಮ್ಮ ಜನಪ್ರತಿನಿಧಿಗಳು ಮಾಡಿರುವ ಒಳ್ಳೆಯ ಕಾರ್ಯಗಳನ್ನು ಮರೆತಿರುತ್ತಾರೆ. ಇಂತಹ ಮತದಾರರಿಗೆ ಚಿಕ್ಕಪ್ಪನ ಪರವಾಗಿ ವಿಚಾರಗಳನ್ನು ತಿಳಿಸಿದ್ದೇನೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post