ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಧರ್ಮಸ್ಥಳ #Dharmasthala ಹಾಗೂ ಸುಬ್ರಹ್ಮಣ್ಯ #Subrahmanya ದೇವಾಲಯಗಳಿಗೆ ಭೇಟಿ ನೀಡಿದ ಬೆನ್ನಲ್ಲೇ ರಾಕಿಂಗ್ ಸ್ಟಾರ್ ಯಶ್ #Rocking Star Yash ಗುಡ್ ನ್ಯೂಸ್ ನೀಡಿದ್ದು, ಇಂದಿನಿಂದ ತಮ್ಮ `ಟಾಕ್ಸಿಕ್’ #Taxic ಸಿನಿಮಾ ಶೂಟಿಂಗ್ ಆರಂಭವಾಗಿರುವುದಾಗಿ ಹೇಳಿದ್ದಾರೆ.
ಈ ಕುರಿತಂತೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿಕೊಂಡಿರುವ ಅವರು, ಹೊಸ ಪಯಣ ಆರಂಭ ಎಂದು ಹಾಕುವ ಮೂಲಕ ಟಾಕ್ಸಿಕ್ ಸಿನಿಮಾ ಕುರಿತು ಅಪ್ಡೇಟ್ ನೀಡಿದ್ದಾರೆ.
Also read: ಧರ್ಮಸ್ಥಳ | ಸಾಮಾನ್ಯ ಪಂಕ್ತಿಯಲ್ಲಿ ಪ್ರಸಾದ ಊಟ ಮಾಡಿದ ನಟ ಯಶ್ ದಂಪತಿ
ಸರಳವಾಗಿ ಮುಹೂರ್ತ
ಇನ್ನು, ಯಶ್ ಅಭಿನಯದ ಬಹು ನಿರೀಕ್ಷಿತ ಟಾಕ್ಸಿಕ್ ಸಿನಿಮಾಗೆ ಇಂದು ಮುಹೂರ್ತ ಪೂಜೆ ನಡೆಸಿ, ಕ್ಲಾಪ್ ಮಾಡಲಾಗಿದೆ.

ಸರಳವಾಗಿ ಸಮಾರಂಭ ನಡೆಸಿ ಚಿತ್ರೀಕರಣಕ್ಕೆ ಇಂದು ಚಾಲನೆ ನೀಡಲಾಗಿದ್ದು, ಇಂದಿನಿಂದಲೇ ಶೂಟಿಂಗ್ ಸಹ ಆರಂಭವಾಗಿದೆ. ಈ ವೇಳೆ, ಹಾಲಿವುಡ್ ತಂತ್ರಜ್ಞರು ಮತ್ತು ಚಿತ್ರತಂಡ ಹೊರತಾಗಿ ಬೇರೆ ಗಣ್ಯರಿಗೆ ಅವಕಾಶವಿರಲಿಲ್ಲ.
ಟಾಕ್ಸಿಕ್ ಚಿತ್ರದ ಶೂಟಿಂಗ್ ಮತ್ತು ಇತರ ಕೆಲಸ ಕಾರ್ಯಗಳು ಇಷ್ಟು ದಿನ ವಿಳಂಬವಾಗಿತ್ತು. ಕಾನೂನು ತೊಡಕು ಸಹ ಎದುರಾಗಿತ್ತು. ಈ ಚಿತ್ರದ ಶೂಟಿಂಗ್ ಆರಂಭಕ್ಕೆ ಮುನ್ನ ಯಶ್ ತಮ್ಮ ಕುಟುಂಬ ಹಾಗೂ ಚಿತ್ರದ ನಿರ್ಮಾಪಕ ವೆಂಕಟ ನಾರಾಯಣ ಅವರ ಜೊತೆ ಧರ್ಮಸ್ಥಳ, ಉಜಿರೆ ಬಳಿಯ ಸುರ್ಯ ದೇವಸ್ಥಾನ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಿ ಬಂದಿದ್ದರು.

ಪ್ರಮುಖವಾಗಿ, ಉಜಿರೆಯ ಸುರ್ಯ ದೇವಸ್ಥಾನದಲ್ಲಿ ಯಶ್ ದಂಪತಿ ಮತ್ತು ಕೋ ಪ್ರೊಡ್ಯೂಸರ್ ವೆಂಕಟ್ ಕೋಣಂಕಿ ಸ್ಕ್ರಿಪ್ಟ್ ಪೂಜೆ ಮಾಡಿದ್ದರು.
ಕೆವಿಎನ್ ಪ್ರೊಡಕ್ಷನ್ ಮತ್ತು ಯಶ್ ಅವರ ಮಾನ್ಸಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸುತ್ತಿರುವ ಟಾಕ್ಸಿಕ್ ಚಿತ್ರವನ್ನು ಗೀತು ಮೋಹನ್ ದಾಸ್ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಛಾಯಾಗ್ರಹಣವನ್ನು ರಾಜೀವ್ ರವಿ ನಿರ್ವಹಿಸಲಿದ್ದಾರೆ.
ಯಶ್ ಜೊತೆಯಲ್ಲಿ ನಯನತಾರಾ, ಹುಮಾ ಖುರೇಷಿ, ಕಿಯಾರಾ ಅಡ್ವಾಣಿ ಮತ್ತು ಮಲಯಾಳಂ ನಟ ಶೈನ್ ಟಾಮ್ ಚಾಕೋ ಸೇರಿ ಹಲವು ಖ್ಯಾತನಟರು ಅಭಿನಯಿಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















