ಕಲ್ಪ ಮೀಡಿಯಾ ಹೌಸ್ | ಧರ್ಮಸ್ಥಳ |
ಕರಾವಳಿಯ ದೇವಾಲಯಗಳಿಗೆ ಭೇಟಿ ನೀಡಿ ಹರಕೆ ತೀರಿಸಿದ ರಾಕಿಂಗ್ ಸ್ಟಾರ್ ದಂಪತಿ ಧರ್ಮಸ್ಥಳದಲ್ಲಿ ಸಾಮಾನ್ಯ ಪಂಕ್ತಿಯಲ್ಲಿ ಕುಳಿತು ಊಟ ಮಾಡಿದ್ದಾರೆ.
ತಮ್ಮ ಟಾಕ್ಸಿಕ್ ಸಿನಿಮಾ ಆರಂಭಕ್ಕೂ ಮುನ್ನ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್ #Rocking Star Yash ಹಾಗೂ ಅವರ ಪತ್ನಿ ರಾಧಿಕಾ #Radhika ಅವರುಗಳು ಹರಕೆ ತೀರಿಸಿದ್ದಾರೆ.
Also read: ಡಿಸೆಂಬರ್ ನಲ್ಲಿ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ | ಸಮಿತಿ ಸದಸ್ಯರ ಸಭೆಯಲ್ಲಿ ನಿರ್ಣಯ
ಅದೇ ರೀತಿ ಧರ್ಮಸ್ಥಳಕ್ಕೂ ಸಹ ಭೇಟಿ ನೀಡಿದ ಅವರು ಶ್ರೀ ಮಂಜುನಾಥ ಸ್ವಾಮಿಯ #Shri Manjunatha Swamy ದರ್ಶನ ಪಡೆದು, ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದಾರೆ.
ನಂತರ ಸಾಮಾನ್ಯ ಪಂಕ್ತಿಯಲ್ಲಿ ಎಲ್ಲರಂತೆಯೇ ಈ ಸ್ಟಾರ್ ದಂಪತಿ ಕುಳಿತು ಪ್ರಸಾದ ಊಟ ಮಾಡಿದ್ದಾರೆ.
ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದರೂ ಯಶ್ ದಂಪತಿ ಸರಳತೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post