ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರೀತಿಸಿಯ ಯುವತಿಗೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಭೀಕರವಾಗಿ ಸಾಯಿಸಿದ ದುರ್ಘಟನೆ ನಗರದಲ್ಲಿ ನಡೆದಿದೆ.
ಇಲ್ಲಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಘಟನೆ ನಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಶಿವಕುಮಾರ್ ಹಾಗೂ ಯುವತಿ(ಹೆಸರು ಪ್ರಕಟಿಸುತ್ತಿಲ್ಲ) ನಡುವೆ ಮದುವೆ ವಿಚಾರಕ್ಕೆ ಸಂಘರ್ಷ ನಡೆದಿದೆ ಎಂದು ಹೇಳಲಾಗಿದೆ. ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದ ಕಾರಣ ಯುವತಿಯ ಮೇಲೆ ಶಿವಕುಮಾರ್ ಪೆಟ್ರೋಲ್ ಸುರಿದ ಬೆಂಕಿ ಹಚ್ಚಿದ್ದಾನೆ ಎಂದು ಹೇಳಲಾಗಿದೆ.
Also read: ಎಪ್ರಿಲ್ 1ರಂದು ರಾಜ್ಯಕ್ಕೆ ಅಮಿತ್ ಶಾ ಭೇಟಿ: ಚುರುಕುಗೊಂಡ ಬಿಜೆಪಿ ವಲಯ
ತೀವ್ರ ಸುಟ್ಟ ಗಾಯಗಳಿಂದ ನರಳಿದ ಯುವತಿ ಒಂದೂವರೆ ದಿನ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಕೊನೆಯುಸಿರೆಳೆದಿದ್ದಾಳೆ.
ಯುವತಿ ತಂದೆ ಡೆಪ್ಯೂಟಿ ತಹಶೀಲ್ದಾರ್ ಆಗಿದ್ದು, ಶಿವಕುಮಾರನೇ ನನ್ನ ಮಗಳನ್ನು ಸಾಯಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಆದರೆ, ಯುವತಿ ಮದುವೆ ಆಗುವಂತೆ ಒತ್ತಾಯಿಸಿ, ನನ್ನನ್ನು ಬೆದರಿಸಿ ಆಕೆಯೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ನಾನೇ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದೆ ಎಂದು ಆರೋಪಿ ಹೇಳಿರುವುದಾಗಿ ವರದಿಯಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯಿಂದಷ್ಟೇ ಸತ್ಯ ಹೊರಬರಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post