ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಟ ದರ್ಶನ್ #Darshan ಹಾಗೂ ಗ್ಯಾಂಗ್ ನಡೆಸಿದ ಭೀಕರ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಸಲ್ಲಿಕೆ ಮಾಡಿರುವ ಬೆನ್ನಲ್ಲೇ ಹಲವು ವಿಚಾರಗಳು ಬಹಿರಂಗಗೊಳ್ಳುತ್ತಿದ್ದು, ರೇಣುಕಾಸ್ವಾಮಿ #Renukaswamy ಕುರಿತಾಗಿ ಶಾಕಿಂಗ್ ಸುದ್ದಿ ಹೊರಬಿದ್ದಿದೆ.
ಕೊಲೆಯಾದ ರೇಣುಕಾಸ್ವಾಮಿ ಹುಟ್ಟಿನಿಂದಲೇ ಒಂದೇ ವೃಷಣ ಹೊಂದಿದ್ದಾರೆ ಎಂಬ ಮಾಹಿತಿ ಬಯಲಾಗಿದ್ದು, ಇದು ಒಂದು ವೈಕಲ್ಯವಾಗಿದೆ ಎಂದು ವರದಿಯಾಗಿದೆ.
Also read: ಹೈಕೋರ್ಟ್ ಮೆಟ್ಟಿಲೇರಿದರಾ ಕೊಲೆ ಆರೋಪಿ ನಟ ದರ್ಶನ್? ಕಾರಣವೇನು?

ರೇಣುಕಾಸ್ವಾಮಿ ಸಿಂಗಲ್ ಟೆಸ್ಟಿಕಲ್ ಬೇಬಿ ಆಗಿ ಹುಟ್ಟಿದ್ದರು ಅನ್ನೋ ಮಾಹಿತಿ ಬಯಲಾಗಿದೆ.ಒಂಟಿ ವೃಷಣ ಹೊಂದಿರುವ ವ್ಯಕ್ತಿಗಳಲ್ಲಿ ಲೈಂಗಿಕ ಬಯಕೆ ಹೆಚ್ಚು ಅಥವಾ ಕಡಿಮೆ ಇರಲ್ಲ. ಲೈಂಗಿಕ ಆಸಕ್ತಿ ಹಾಗೂ ಬಯಕೆಯಲ್ಲಿ ಒಂಟಿ ವೃಷಣದ ಪಾತ್ರ ಹೆಚ್ಚಾಗಿರುವುದಿಲ್ಲ ಎನ್ನುವುದು ವೈದ್ಯ ಲೋಕದ ಮಾತು. ಹುಟ್ಟಿದಾಗಲೇ ಕೆಲವರಲ್ಲಿ ಈ ರೀತಿ ಅಂಗಾAಗ ವೈಕಲ್ಯ ಕಾಣಿಸಿಕೊಳ್ಳುತ್ತದೆ. ಭಾಗಶಃ ಒಂಟಿ ವೃಷಣ ಸಮಸ್ಯೆಯಿಂದ ಕೆಲವು ಬಾರಿ 3 ರಿಂದ 4 ತಿಂಗಳ ಒಳಗೆ ಮಗುವಿನಲ್ಲಿ ಒಂಟಿ ವೃಷಣ ಸಮಸ್ಯೆ ಸರಿಯಾದರೆ ಭವಿಷ್ಯದಲ್ಲಿ ಸಮಸ್ಯೆ ಇರುವುದಿಲ್ಲ. ಆದರೆ 4 ತಿಂಗಳ ಬಳಿಕ ಭಾಗಶಃ ಒಂಟಿ ವೃಷಣ ಸಮಸ್ಯೆಗಳು ಸರಿ ಹೋಗದಿದ್ದಲಿ ಶಾಶ್ವತ ಸಮಸ್ಯೆಯಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post