ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಹರಿತ್ ನೋಹ್ ಜುಲೈ 25 ರಿಂದ 27, 2025 ರವರೆಗೆ ಸ್ಪೇನ್‌ನಲ್ಲಿ ನಡೆಯಲಿರುವ ಐದನೇ ದಶಕದ 41ನೇ ಆವೃತ್ತಿಯ ‘ಬಾಜಾ ಅರಾಗಾನ್’ ರ್ಯಾಲಿಗೆ ಸ್ಪರ್ಧಿಸಲಿದ್ದಾರೆ.
ನೋಹ್ ಶೆರ್ಕೊ ಟಿವಿಎಸ್ ರ್‍ಯಾಲಿ ಫ್ಯಾಕ್ಟರಿ ತಂಡಕ್ಕಾಗಿ ರ್ಯಾಲಿ ಜಿಪಿ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ನೋಹ್ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಎಫ್‌ಐಎ-ಎಫ್‌ಐಎಂ ವರ್ಲ್ಡ್ ರ್ಯಾಲಿ-ರೈಡ್ ಚಾಂಪಿಯನ್‌ಶಿಪ್ (ಡಬ್ಲ್ಯು 2 ಆರ್‌ಸಿ) ನ ಅಂತಿಮ ಸುತ್ತುಗಳಿಗೆ ತಯಾರಿ ನಡೆಸುತ್ತಿದ್ದಾರೆ.
ಹರಿತ್ ನೋಹ್ ಗೆ ಈ ಸವಾಲು ಹೊಸದೇನಲ್ಲ. ಅವರು ಹಿಂದೆ ಬಾಜಾ ಅರಾಗಾನ್‌ನಲ್ಲಿ ಸ್ಥಿರ ಪ್ರದರ್ಶನಗಳನ್ನು ನೀಡಿದ್ದಾರೆ – 2023 ರಲ್ಲಿ 5ನೇ ಸ್ಥಾನ ಮತ್ತು 2024 ರಲ್ಲಿ 7ನೇ ಸ್ಥಾನ ಪಡೆದಿದ್ದಾರೆ.
ಈ ಬಗ್ಗೆ ಮಾತನಾಡಿದ ನೋಹ್ ‘ಬಾಜಾ ಅರಾಗಾನ್ ಯಾವಾಗಲೂ ನನ್ನ ನೆಚ್ಚಿನ ಈವೆಂಟ್‌ಗಳಲ್ಲಿ ಒಂದಾಗಿದ್ದು, ಇಲ್ಲಿ ಸ್ಪರ್ಧಿಸಲು ಉತ್ಸುಕನಾಗಿದ್ದೇನೆ ಎಂದರು.
2025ರಲ್ಲಿ ಎರಡು ಸತತ ಗಾಯದ ಸಮಸ್ಯೆಗಳಿಂದ ಹೊರಬಂದ ನಂತರ, ನೋಹ್ ಇದೀಗ ಮತ್ತೆ ಸ್ಪರ್ಧಾತ್ಮಕ ಹಂತಕ್ಕೆ ಮರಳುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post