ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರು (Bangaluru) ಮಲ್ಲೇಶ್ವರದ ಭಾರತೀಯ ವಿಜ್ಞಾನ ಸಂಸ್ಥೆಯ ಪಕ್ಕದಲ್ಲಿರುವ ಶ್ರೀ ಸರ್ಕಲ್ ಮಾರಮ್ಮ ದೇವಸ್ಥಾನದಲ್ಲಿ ಅಕ್ಟೋಬರ್ 11ರಿಂದ 21ರವರೆಗೆ ಶರನ್ನವರಾತ್ರೋತ್ಸವ (Sharannavaratri utsava) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಪದಾಧಿಕಾರಿಗಳು ತಿಳಿಸಿದ್ದಾರೆ.
ಪ್ರತಿದಿನ ವಿಶೇಷ ಅಲಂಕಾರ, ಲಲಿತ ಸಹಸ್ರನಾಮ ಪಾರಾಯಣ
ಶರನ್ನವರಾತ್ರೋತ್ಸವದ ಅಂಗವಾಗಿ ಸಮಾರಂಭದ ಎಲ್ಲಾ ದಿನಗಳಲ್ಲೂ ಶ್ರೀ ಅಮ್ಮನವರಿಗೆ ವಿವಿಧ ರೀತಿಯ ವಿಶೇಷ ಅಲಂಕಾರಗಳನ್ನು ಮಾಡಲಾಗುವುದು. ಪ್ರತಿದಿನ ಮಧ್ಯಾಹ್ನ 1 ಗಂಟೆಗೆ ಸಾಮೂಹಿಕ ಲಲಿತ ಸಹಸ್ರನಾಮ ಪಾರಾಯಣ ನಡೆಯಲಿದೆ.
ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ
ಉತ್ಸವದ ಅಂಗವಾಗಿ ಪ್ರತಿದಿನ ಸಂಜೆ 6.30ಕ್ಕೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಕ್ಟೋಬರ್ 11ರಂದು ಶರನ್ನವರಾತ್ರೋತ್ಸವದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಅಕ್ಟೋಬರ್ 12ರಂದು ನಿರೀಕ್ಷಾ ಮಂಜುನಾಥ್ ರಾವ್ ಮತ್ತು ಸಂಗಡಿಗರಿಂದ ‘ಹರಿನಾಮ ಸಂಕೀರ್ತನೆ’ ನಡೆಯಲಿದೆ. ಅಕ್ಟೋಬರ್ 13ರಂದು ಆದಿಶಕ್ತಿ ಗಂಗಮ್ಮ ಭಕ್ತ ಮಂಡಲಿಯ ಸದಸ್ಯರಿಂದ ‘ಭಜನೆ’ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಅಕ್ಟೋಬರ್ 14ರಂದು ರಂಜಿತಾ ಪ್ರಸಾದ್, ಭಾವನಾ ಮೂರ್ತಿ ಹಾಗೂ ಸಂಗಡಿಗರಿಂದ ಭಾವಗೀತೆ, ಭಕ್ತಿಗೀತೆ ಮತ್ತು ಜಾನಪದ ಗೀತೆಗಳ ಗಾಯನ ಒಳಗೊಂಡ ‘ಮಿಶ್ರ ಮಾಧುರ್ಯ’ ಕಾರ್ಯಕ್ರಮ ನಡೆಯಲಿದೆ. ಅಕ್ಟೋಬರ್ 15ರಂದು ಶಿವರಂಜನಿ ಮಹಿಳಾ ಸಾಂಸ್ಕೃತಿಕ ಸಂಘದ ಸದಸ್ಯರಿಂದ ‘ಭಜನೆ’ ಕಾರ್ಯಕ್ರಮ ನಡೆಯಲಿದೆ.
ಅಕ್ಟೋಬರ್ 16ರಂದು ಶ್ರೀದೇವಿ ಮತ್ತು ಸಂಗಡಿಗರಿಂದ ‘ಸಂಗೀತ ಸಂಭ್ರಮ’, ಅಕ್ಟೋಬರ್ 17ರಂದು ಕು|| ಅಹಿಕಾ ನಾಗದೀಪ್ ಮತ್ತು ಸಂಗಡಿಗರಿಂದ ‘ವೀಣಾ ವಾದನ’ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಕ್ಟೋಬರ್ 18ರಂದು ಲಲಿತ ಕಲಾ ಕೇಂದ್ರದ ಮಕ್ಕಳಿಂದ ‘ಭರತನಾಟ್ಯ’ ಪ್ರದರ್ಶನ ನಡೆಯಲಿದೆ. ಅಕ್ಟೋಬರ್ 19ರಂದು ಗಿರಿಜಾ ಶ್ಯಾಮಣ್ಣ ಮತ್ತು ಸಂಗಡಿಗರಿಂದ ‘ದೇವರನಾಮಗಳು’ ಕಾರ್ಯಕ್ರಮ ಹಾಗೂ ಅಕ್ಟೋಬರ್ 20ರಂದು ಮಾಯಾ ಖರ ಭಕ್ತಿ ವೃಂದದವರಿಂದ ‘ಸಂಗೀತ’ ಕಾರ್ಯಕ್ರಮ ನಡೆಯಲಿದೆ.
Also Read>> ‘ಜೆನ್ ಜಿ’ ಯುವ ಸಮೂಹಕ್ಕೆ ದಿನಪತ್ರಿಕೆಗಳ ಓದು ಅತ್ಯಗತ್ಯ: ಡಾ. ಪಿ. ನಾರಾಯಣ್
Bangaluru: ಅ.21ರಂದು ಗಣಪತಿ, ಅಮ್ಮನವರ ಮೆರವಣಿಗೆ
ಶರನ್ನವರಾತ್ರೋತ್ಸವದ ಸಮಾರೋಪದ ಅಂಗವಾಗಿ ಅಕ್ಟೋಬರ್ 21ರಂದು ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಶ್ರೀ ಗಣಪತಿ ಹಾಗೂ ಶ್ರೀ ಅಮ್ಮನವರ ಮೆರವಣಿಗೆಯ ಉತ್ಸವ ನಡೆಯಲಿದೆ. ಈ ಮೂಲಕ 11 ದಿನಗಳ ಶರನ್ನವರಾತ್ರೋತ್ಸವಕ್ಕೆ ಸಂಭ್ರಮದ ತೆರೆ ಬೀಳಲಿದೆ ಎಂದು ದೇವಸ್ಥಾನದ ಪದಾಧಿಕಾರಿಗಳು ತಿಳಿಸಿದ್ದಾರೆ.
ಉತ್ಸವದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಅಮ್ಮನವರ ಆಶೀರ್ವಾದ ಪಡೆಯುವಂತೆ ದೇವಸ್ಥಾನದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










