ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಬಾಂಗ್ಲಾದೇಶದ ಅಗಿಲೆ ಫೋಟೋಗ್ರಾಫಿಕ್ ಸೊಸೈಟಿ ಹಮ್ಮಿಕೊಂಡಿದ್ದ ರೈಜ್ ಆಫ್ ದಿ ಅರ್ಥ್ ಅಂತರ್ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಶಿವಮೊಗ್ಗದ ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಕ್ಲಿಕ್ಕಿಸಿದ ಶ್ರೀ ಧರ್ಮಸ್ಥಳದ ಬಾಹುಬಲಿ ಮಸ್ತಕಾಭಿಷೇಕ ಚಿತ್ರ ಶೀರ್ಷಿಕೆಯ ಚಿತ್ರಕ್ಕೆ ಫೋಟೋ ಟ್ರಾವೆಲ್ ವಿಭಾಗದಲ್ಲಿ ಹಾನರಬಲ್ ಮೆನ್ಷನ್ ಪ್ರಶಸ್ತಿಗೆ ಭಾಜನವಾಗಿದೆ. ಪ್ರಕೃತಿ ವಿಭಾಗದಲ್ಲಿ ಕ್ಲೈಂಬಿಂಗ್, ವರ್ಣ ವಿಭಾಗದಲ್ಲಿ ಫೋರ್ಸ್ ಹಾಗೂ ಫೋಟೋ ಜರ್ನಲಿಸಂ ವಿಭಾಗದಲ್ಲಿ ಡರ್ಟಿ ರೈಸ್ ಚಿತ್ರ ಶೀರ್ಷಿಕೆಯ ಮೂರು ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ.
ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್’ಗೆ ಬಾಂಗ್ಲಾದೇಶದ ಪ್ರತಿಷ್ಠಿತ ಹಾನರಬಲ್ ಮೆನ್ಷನ್ ಪ್ರಶಸ್ತಿ pic.twitter.com/BCaQhh4lcJ
— Kalpa News (@KalpaNews) December 17, 2020
ಈ ಹಿಂದೆ ಶಿವಮೊಗ್ಗ ನಾಗರಾಜ್ ಕ್ಲಿಕ್ಕಿಸಿದ ಅನೇಕ ಚಿತ್ರಗಳು ರಾಜ್ಯ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಬೆಳ್ಳಿ ಪದಕ ಪ್ರಶಸ್ತಿಗೆ ಭಾಜನವಾಗಿವೆ.ಅಲ್ಲದೆ ಇವರ ಛಾಯಾಚಿತ್ರಗಳು ಶಾಲಾ ಕಾಲೇಜು ಹಾಗೂ ಕುವೆಂಪು ರಂಗ ಮಂದಿರ, ಕರ್ನಾಟಕ ಸಂಘ ಸೇರಿದಂತೆ ಹಲವೆಡೆ ಶಿವಮೊಗ್ಗ ನಾಗರಾಜ್ ಅವರ ಪ್ರಕೃತಿ, ಪ್ರಾಣಿ ಪಕ್ಷಿ, ಗ್ರಾಮೀಣ ಜನ ಜೀವನ ಇನ್ನೂ ಅನೇಕ ಬಗೆಯ ಛಾಯಾಚಿತ್ರಗಳು ಜನಮನ ಸೆಳೆದಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post