ಕಲ್ಪ ಮೀಡಿಯಾ ಹೌಸ್ | ಬಂಟ್ವಾಳ |
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಷಷ್ಠ್ಯಬ್ದ ಸಂಭ್ರಮ ಪ್ರಯುಕ್ತ ತಾಲೂಕಿನ ಮಂಕುಡೆ ಕುಡ್ತಮುಗೇರು ಗ್ರಾಮದ ಶ್ರೀ ವಿಷ್ಣುಮೂರ್ತಿ ಭಜನಾ ಮಂದಿರದ ಕಲಾ ಮಂಟಪದಲ್ಲಿ ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರ ಆಯೋಜಿಸಲಾಗಿತ್ತು.
ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಬೆಂಗಳೂರು ಎಸ್ಸಲೋರ್ ವಿಷನ್ ಫೌಂಡೇಷನ್, ಮಂಕುಡೆ-ಕುಡ್ತಮುಗೇರು ಹಳೆ ವಿದ್ಯಾರ್ಥಿ ಯುವಕ ಮಂಡಲ, ಕುಡ್ತಮುಗೇರು ವಿನಯಶ್ರೀ ಯುವಕ ಮಂಡಲ, ಬಂಟ್ವಾಳ ತಾಲೂಕು, ವಿಟ್ಲ ವಲಯ ಧ್ವನಿ ಬೆಳಕು ಸಂಯೋಜಕರ ಒಕ್ಕೂಟ ಇವರ ಸಹಯೋಗದಲ್ಲಿ ಕೊಳ್ನಾಡು ಗ್ರಾಮಸಮಿತಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ, ಮಂಕುಡೆ ಸ್ವ-ಸಹಾಯ ಸಂಘಗಳ ಘಟ ಸಮಿತಿ ಇವರ ಆಯೋಜಕತ್ವದಲ್ಲಿ ಕಾರ್ಯಕ್ರಮ ನಡೆಯಿತು. 148 ಮಂದಿ ಶಿಬಿರದ ಸದುಪಯೋಗ ಪಡೆದುಕೊಂಡರು.
ಈ ಸಂದರ್ಭದಲ್ಲಿ ಒಡಿಯೂರು ಸ್ವಾಮೀಜಿ, ಮಂಗಳೂರು ನೇತ್ರಾಧಿಕಾರಿ ಡಾ. ಅನಿಲ ರಾಮಾನುಜಂ, ಪೂಣೆ ವಜ್ರಮಾತಾ ಮಹಿಳಾ ವಿಕಾಸ ತಂಡದ ಅಧ್ಯಕ್ಷರು ಜಯಲಕ್ಷ್ಮೀ ಪದ್ಮನಾಭ ಶೆಟ್ಟಿ, ಕೊಳ್ನಾಡು ಗ್ರಾಮ ಪಂಚಾಯತ್‌ನ ಮಂಕುಡೆ ವಾರ್ಡಿನ ಸದಸ್ಯರು, ಯೋಜನೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post