ಕಲ್ಪ ಮೀಡಿಯಾ ಹೌಸ್ | ಬಂಟ್ವಾಳ |
ತಾಲೂಕಿನ ನಾಗವನ – ಕುಂಟ್ರಕಲ, ಕೊಳ್ನಾಡು ಗ್ರಾಮದ ಶ್ರೀ ಮಹಮ್ಮಾಯೀ ಭಜನಾ ಮಂಡಳಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಕಾರ್ಯಕ್ರಮ ಜರುಗಿತು.
ವಿಶೇಷ ಭಜನಾ ಸೇವೆ ನಡೆಸಲಾಗಿದ್ದು, ಈ ಸಮಯ ಪುಟಾಣಿ ಮಕ್ಕಳು ರಾಧಾಕೃಷ್ಣ ವೇಷಧಾರಿಗಳಾಗಿ ಭಜನೆಗೆ ಹೆಜ್ಜೆ ಹಾಕಿದರು. ವಿಶೇಷವಾಗಿ ಪುಟಾಣಿ ಮಕ್ಕಳಿಗೆ ಶ್ಲೋಕ ಹೇಳುವ ಸ್ಪರ್ಧೆ ಏರ್ಪಡಿಸಲಾಗಿತ್ತು.
ಭಕ್ತಿಗೀತೆ, ಕೊಡಪಾನಕ್ಕೆ ಚೆಂಡು ಹಾಕುವುದು, ಬಾಲ್ ಪಾಸಿಂಗ್, ಮಡಕೆ ಒಡೆಯುವುದು, ಭಕ್ತಿಗೀತೆ, ರಂಗೋಲಿ, ಹಗ್ಗಜಗ್ಗಾಟ, ತ್ರೋಬಾಲ್, ವಾಲಿಬಾಲ್, ಬಲೂನ್ ಒಡೆಯುವುದು ಮುಂತಾದ ಸ್ಪರ್ಧೆಗಳನ್ನು ನಡೆಸಲಾಯಿತು.
ಸಾಮಾನ್ಯ ಜ್ಞಾನ ಪ್ರಶ್ನೆ ಕೇಳುತ್ತಾ, ಉತ್ತರಿಸಿದವರಿಗೆ ಸ್ಥಳದಲ್ಲೇ ಬಹುಮಾನ ನೀಡಲಾಯಿತು. ಪುಟಾಣಿ ಮಕ್ಕಳು, ಮಹಿಳೆಯರು ಹಾಗೂ ಪುರುಷರು ಸ್ಪರ್ಧೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಊಟ ಉಪಹಾರಕ್ಕೆ ಸುಮಾರು ಹದಿಮೂರು ಮನೆಯರು ಅವರ ಮನೆಯಲ್ಲೇ ತಯಾರಿಸಿ ತಂದ ಬಗೆಬಗೆಯ ತಿನಿಸು (ಖಾದ್ಯ) ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ನೀಡಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post