ಕಲ್ಪ ಮೀಡಿಯಾ ಹೌಸ್ | ಬರ್ಲಿನ್ |
ಭಾರತದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ದಾರಿದೀಪವಾದ ಮತ್ತು ಆತ್ಮವಿಶ್ವಾಸವನ್ನು ಒದಗಿಸುವ ಬಜೆಟನ್ನು ಭಾರತ ಸರ್ಕಾರ #Union Budget ಈ ವರ್ಷ ಮಂಡಿಸಿದೆ ಎಂದು ಬರ್ಲಿನ್ ಸ್ಕೂಲ್ ಆಫ್ ಬಿಸಿನೆಸ್ ಅಂಡ್ ಇನೋವೇಷನ್ ಪ್ರಾಧ್ಯಾಪಕರಾದ ಡಾ.ಜಿ.ಎಸ್. ನವ್ಯ ವಿಶ್ಲೇಷಣೆ ಮಾಡಿದ್ದಾರೆ
ಸಮಗ್ರ ದಾಖಲಾತಿ ಅನುಪಾತವನ್ನು ಸುಧಾರಿಸುವ ನಿಟ್ಟಿನಲ್ಲಿ ನಿರಂತರ ಗಮನವನ್ನು ಹರಿಸಿರುವುದು ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್, ರಾಷ್ಟ್ರೀಯ ಕ್ರೆಡಿಟ್ ಫ್ರೇಮ್ ವರ್ಕ್, ಮಲ್ಟಿಪಲ್ ಎಂಟ್ರಿ – ಮಲ್ಟಿಪಲ್ ಎಕ್ಸಿಟ್ ವ್ಯವಸ್ಥೆಯಂತಹ ರಚನಾತ್ಮಕ ಸುಧಾರಣೆಗಳು ಶೈಕ್ಷಣಿಕ ಕ್ಷೇತ್ರಕ್ಕೆ ಭದ್ರ ಅಡಿಪಾಯವಾಗಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಫಲಿತಾಂಶ ಆಧಾರಿತ ಶಿಕ್ಷಣ, ಉದ್ಯಮ – ಶೈಕ್ಷಣಿಕ ಸಹಯೋಗ, ದ್ವೈವಾರ್ಷಿಕ ಪ್ರವೇಶಗಳು, ಕೌಶಲ್ಯಧಾರಿತ ಪದವಿ ಕಾರ್ಯಕ್ರಮಗಳು ಉನ್ನತ ಶಿಕ್ಷಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡುಯುವ ಪ್ರಯತ್ನಕ್ಕೆ ಸಹಕಾರಿಯಾಗಲಿವೆ.
ಸಂಶೋಧನಾ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅವಕಾಶ ನೀಡಿರುವುದು ಭಾರತದ ಜಾಗತಿಕ ಶೈಕ್ಷಣಿಕ ಆಕಾಂಕ್ಷೆಗಳನ್ನು ಸೂಚಿಸುತ್ತದೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಈ ಬಾರಿಯ ಬಜೆಟ್ ಆ ಕ್ಷೇತ್ರದಲ್ಲಿ ಸಾಕಷ್ಟು ಮೈಲಿಗಲ್ಲುಗಳನ್ನು ಸ್ಥಾಪಿಸಿದೆ ಎಂದು ಬಣ್ಣಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















