ಕಲ್ಪ ಮೀಡಿಯಾ ಹೌಸ್
ಭಟ್ಕಳ: ಇಲ್ಲಿನ ಸರ್ಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಕೊಠಡಿಯ ಎದುರುಗಡೆ ಆವರಣದಲ್ಲಿ ಸದಾ ಬೀದಿ ನಾಯಿಗಳು ಬಂದು ಮಲಗಿ ಗಾಡ ನಿದ್ರೆಯಲ್ಲಿ ಜಾರಿರುತ್ತವೆಯಾದರೂ, ಭದ್ರತಾ ಸಿಬ್ಬಂದಿಗಳಾಗಲಿ, ಆರೋಗ್ಯ ಅಧಿಕಾರಿಗಳಾಗಲಿ ಯಾರು ಕೂಡ ಅತ್ತ ಗಮನ ಹರಿಸುವುದಿಲ್ಲ.
ಆಸ್ಪತ್ರೆಯ ಆರೋಗ್ಯಾಧಿಕಾರಿಗಳು ಮತ್ತು ಅಲ್ಲಿನ ಸಿಬ್ಬಂದಿಗಳ ನಿರ್ಲಕ್ಷ್ಯ ಮನೋಭಾವನೆಯ ಪರಿಣಾಮ ಈ ಬೀದಿ ನಾಯಿಗಳು ಸಾರ್ವಜನಿಕ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿವೆ.
ತುರ್ತು ಚಿಕಿತ್ಸೆಗೆ ಬರುವ ರೋಗಿಗಳಿಗೆ ಈ ಬೀದಿ ನಾಯಿಗಳು ಕಚ್ಚಿದರೆ ಇದ್ದಕ್ಕೆ ಯಾರು ಹೊಣೆ? ಸರ್ಕಾರಿ ಆಸ್ಪತ್ರೆಯನ್ನು ಬೀದಿ ನಾಯಿಗಳ ವಾಸಸ್ಥಾನವಾಗಲು ಬಿಟ್ಟಿದ್ದು ಏಕೆ? ಆಸ್ಪತ್ರೆ ಸಿಬ್ಬಂದಿಗಳ ದಿವ್ಯ ನಿರ್ಲಕ್ಷವೇ ಇದ್ದಕ್ಕೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ವರದಿ: ಜೀವೋತ್ತಮ ಪೈ, ಭಟ್ಕಳ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post