ಹೌದು… ಆ ಚೆಂದುಳ್ಳಿ ಚೆಲುವೆಯರು ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸೌಂಡ್ ಮಾಡಿದ್ದಾರೆ… ಅದೂ ಚಿತ್ರಕ್ಕಲ್ಲ.. ಬದಲಾಗಿ ಕ್ಯಾಲೆಂಡರ್ ವೊಂದಕ್ಕೆ…
ಚಂದನವನದ ಚೆಂದದ ಚೆಂದುಳಿ ಚೆಲುವೆಯರು, ಕನ್ನಡದ ಕ್ಯಾಲೆಂಡರ್ ಒಂದಕ್ಕೆ ಬಗೆ-ಬಗೆಯ ಭಂಗಿಯಲ್ಲಿ, ನವನವೀನ ಧಿರಿಸಿನಲ್ಲಿ ಪೋಸ್ ಕೊಟ್ಟಿರುವುದು ಖ್ಯಾತ ಫೋಟೋಗ್ರಾಫರ್ ಲೋಹಿತ್ ರಾಜ್ ಕ್ಯಾಮೆರಾ ಕಣ್ಣಿಗೆ.
ಮೊದಲನೆದಾಗಿ ಗಾಳಿಪಟ ಖ್ಯಾತಿಯ ಭಾವನ ಸೆಲೆಬ್ರೆಟಿ ಕ್ಯಾಲೆಂಡರ್ 2018ಗಾಗಿ ಪೋಸ್ ಕೊಟ್ಟಿದ್ದಾರೆ.. ಬೇಬಿ ಫ್ರಾಕ್ ಧರಿಸಿ ಕ್ಯಾಮೆರಾಗೆ ಕಣ್ಣುಹೊಡೆದಿದ್ದಾರೆ..
ರಂಗಿತರಂಗ ಖ್ಯಾತಿ ಸುಂದರಿ ರಾಧಿಕಾ ಚೇತನ್ ಲೋಹಿತ್ ರಾಜ್ ಕ್ಯಾಮೆರಾದಲ್ಲಿ ಕಲರ್‌ಫುಲ್ ಚಿತ್ರವಾಗಿದ್ದಾರೆ. ಫಲಾಜೋ ಪ್ಯಾಂಟ್ ಜೊತೆಗೆ ವೈಟ್ ಶರ್ಟ್ ಹಾಕಿ ಮಿರಿಮಿರಿ ಮಿಂಚಿದ್ದಾರೆ.
ಮಡಮಕ್ಕಿ ಹಾಗೂ ಮುಗುಳು ನಗೆ ಚಿತ್ರದ ಮೂಲಕ ಮನೆಮಾತಾಗಿರುವ ನಿಖಿತಾ ನಾರಾಯಣ್ ಈ ಫೋಟೋ ಶೂಟ್‌ನಲ್ಲಿ ಕಂಗೊಳಿಸಿದ್ದು, ಪಿಂಕ್ ಕಲರ್‌ನ ಲಾಂಗ್ ಗೌನ್ ತೊಟ್ಟು, ರೂಪಸಿಯ ರೂಪವಾಗಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾರೆ.
ಗುಜಾರಾತಿ ಗುಲಾಬಿ ಎಂದೇ ಫೇಮಸ್ ಆಗಿರುವ, ಆದರೆ ಕನ್ನಡ ಚಿತ್ರರಂಗದಲ್ಲಿ ಅರಳಿದ ಕುಸುಮ ಆಕಾಂಕ್ಷಾ ಗಾಂಧಿ. ಲೋಹಿತ್ ರಾಜ್ ಕ್ಯಾಮೆರಾ ಪರಿಕಲ್ಪನೆಯಲ್ಲಿ ವೈಟ್ ಅಂಡ್ ಬ್ಲಾಕ್ ಕಲರ್‌ನ ಲಾಂಗ್ ಫ್ರಾಕ್ ತೊಟ್ಟು, ಕ್ಯಾಮೆರಾ ಮುಂದೆ ಕಣ್ಣರಳಿಸಿದ್ದಾರೆ.
ರೂಪದಲ್ಲಿ ದೀಪಿಕಾ ಪಡುಕೋಣೆ ತಂಗಿಯ ರೀತಿ ಕಂಗೊಳಿಸುವ ನಟಿ ಸಂಚಿತಾ ಪಡುಕೋಣೆ… ಈಕೆ ಬೆಡ್ ರೂಮ್ ಲೊಕೇಷನಲ್ಲಿ ವೈಟ್ ಶರ್ಟ್ ತೊಟ್ಟು , ಬೋಲ್ಡ್ ಆಗಿ ಪಡ್ಡೆ ಹುಡುಗರು ಕ್ಲೀನ್ ಬೋಲ್ಡ್ ಆಗುವಂತೆ ಮಿಂಚಿದ್ದಾರೆ..
ಇನ್ನು ಎರಡನೆಯ ಸಲ ಚಿತ್ರ ಖ್ಯಾತಿಯ ಚೆಲುವ ಸಂಗೀತಾ ಭಟ್ ಯುವಕ ಮೈನವಿರೇಳಿಸಿದಾಕೆ. ಈಕೆ ಕ್ಯಾಲೆಂಡರ್ ಫೋಟೋ ಶೂಟ್‌ನಲ್ಲಿ ಮಿನುಗುವ ತಾರೆಯಾಗಿದ್ದು, ವೈಟ್ ಟ್ಯೂಬ್ ಟ್ಯಾಬ್, ಡೆನಿಮ್ ಶಾರ್ಟ್‌ನಲ್ಲಿ ಕಲರ್‌ಫುಲ್ ಫೋಟೋ ಆಗಿದ್ದಾರೆ.
ಹುಚ್ಚ-2, ನಂಜುಂಡಿ ಕಲ್ಯಾಣ ಖ್ಯಾತಿಯ ಸುಂದರಿ ಶ್ರಾವ್ಯ ಸೆಲೆಬ್ರೆಟಿ ಕ್ಯಾಲೆಂಡರ್ 2018ನಲ್ಲಿ ಚಿತ್ತಾರವಾಗಿದ್ದಾರೆ. ಟ್ಯುನಿಕ್ ಟಾಪ್ ಡ್ರೆಸಲ್ಲಿ ಕ್ಯಾಮೆರಾಗೆ ಕಣ್ಣು ಹೊಡೆದಿದ್ದಾರೆ.
ಹಾಟ್ ಬೆಡಗಿ ಶುಭ ಪುಂಜಾ ಕೆಂಪು ಬಣ್ಣದ ಫ್ರಾಕ್ ಧರಿಸಿ ಕ್ಯಾಮೆರಾಗೆ ಪ್ಲೈನ್ ಕಿಸ್ ಕೊಟ್ಟಿದ್ದಾರೆ ..
ಇನ್ನು ನವ ನಟಿಯಾರಾದ ಕೀರ್ತಿ ಲಕ್ಷ್ಮೀ, ಸುಕೃತ ದೇಶಪಾಂಡೆ, ಸುಶ್ಮಿತಾ ಜೋಶಿ ಸೆಲಬ್ರಿಟಿ ಕ್ಯಾಲೆಂಡರ್ 2018ನಲ್ಲಿ ಬಗೆ ಬಗೆಯ ನಿಲುವಂಗಿಯಲ್ಲಿ ಕಲರ್ ಫುಲ್ ಫೋಟೋಸ್ ಆಗಿದ್ದಾರೆ.
ಲೋಹಿತ್ ರಾಜ್ ಸಾರಥ್ಯದ ಸೆಲೆಬ್ರಿಟಿ ಕ್ಯಾಲೆಂಡರ್ 2018ರ ಹಾಟ್ ಫೇವರಿಟ್‌ನಲ್ಲೊಬ್ಬರು ತುಪ್ಪದ ಸುಂದರಿ ರಾಗಿಣಿ ದಿವ್ವೇದಿ.. ಅನೇಕ ಫೋಟೋ ಶೂಟ್‌ಗಳಲ್ಲಿ ಮಿಂಚಿರುವ ರಾಗಿಣಿ ಈ ಫೋಟೋ ಶೂಟಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಬಣ್ಣದ ಹೂವುಗಳನ್ನೆ ಬಟ್ಟೆ ಮಾಡಿ ಮೈ ಸುತ್ತಿಕೊಂಡಿರುವಂತೆ, ಫ್ಲಾರಲ್ ಗೌನ್ ಧರಿಸಿಕೊಂಡು ಕ್ಯಾಮೆರಾ ಮುಂದೆ ಫೋಸ್ ಕೊಟ್ಟಿದ್ದಾರೆ.
ನಮ್ಮ ಸ್ಯಾಂಡಲ್‌ವುಡ್‌ನಲ್ಲಿ ಈ ರೀತಿ ಇನ್ನಸ್ಟು ಫೋಟೋ ಶೂಟ್ ಆಗಬೇಕು. ಬೇರೆ ಭಾಷೆಯ ನಟಿಯರಂತೆ ನಮ್ಮ ನಟಿಯರು ಕೂಡ ಮಿರಿಮಿರಿ ಮಿಂಚುವಂತಾಗಬೇಕು.
Discussion about this post