ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ವಿರೋಧಪಕ್ಷಗಳ ವಿರೋಧದ ನಡವೆ ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲಾಗಿದ್ದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣಾ ವಿಧೇಯಕ-2021 ಮಸೂದೆಗೆ ಇಂದು ಅಂಗೀಕಾರ ದೊರೆತಿದೆ.
ತೀವ್ರ ಕುತೂಹಲ ಕೆರಳಿಸಿದ್ದ ಹಾಗೂ ಭಾರಿ ಗದ್ದಲಕ್ಕೆ ಕಾರಣವಾಗಿದ್ದ ಮತಾಂತರ ನಿಷೇಧ ವಿಧೇಯಕಕ್ಕೆ ಇಂದು ಸದನದಲ್ಲಿ ಸ್ಪೀಕರ್ ಕಾಗೇರಿ ದ್ವನಿ ಮತಕ್ಕೆ ಹಾಕಿದರು. ಈ ವೇಳೆ ವಿಧಾನಸಭಾ ಹೆಚ್ಚಿನ ಸದಸ್ಯರು ಮಸೂದೆ ಪರ ಮತ ಹಾಕಿದ್ದು, ಈಗ ಅಂಗೀಕಾರಗೊಂಡಿದೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ನ ತೀವ್ರ ವಿರೋಧದ ನಡುವೆಯೂ ಮತಾಂತರ ನಿಷೇಧ ಮಸೂದೆಗೆ ಬೆಳಗಾವಿ ಸುವರ್ಣಸೌಧದಲ್ಲಿ ಅಂಗೀಕಾರ ಸಿಕ್ಕಿದ್ದು, ಎರಡು ದಿನಗಳ ಹಿಂದೆಯಷ್ಟೇ ಗೃಹ ಸಚಿವ ಆರಗ ಜ್ಞಾನೇಂದ್ರ ಮಂತಾತರ ಕಾಯ್ದೆ ಮಂಡಿಸಿದರು. ಬಳಿಕ ಒಂದಿಡೀ ದಿನ ಕಾಯ್ದೆ ಪರ-ವಿರೋಧ ಚರ್ಚೆ ನಡೆಸಲಾಯ್ತು. ಈಗ ಕೊನೆಗೂ ಧ್ವನಿ ಮತಕ್ಕೆ ಹಾಕಿ ಸರ್ಕಾರ ಒಪ್ಪಿಗೆ ಪಡೆದುಕೊಂಡಿದೆ.
ವಿಧೇಯಕದ ಅನುಮೋದನೆ ಚರಿತ್ರಾರ್ಹ: ಬಿಎಸ್‌ವೈ ಅಭಿನಂದನೆ
’ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ 2021’ ಅನ್ನು ವಿಧಾನಸಭೆ ಅಂಗೀಕರಿಸಿದ್ದು, ನಮ್ಮ ಪಕ್ಷದ ಎಲ್ಲ ಶಾಸಕರನ್ನು ಅಭಿನಂದಿಸುತ್ತೇನೆ. ವಂಚನೆಯ, ಬಲವಂತದ ಅಥವಾ ಆಮಿಷದ ಮತಾಂತರ ಎನ್ನುವ ಪಿಡುಗನ್ನು ಕಿತ್ತೊಗೆಯಬೇಕು ಎನ್ನುವುದು ಪಕ್ಷದ ಹಾಗೂ ಸರ್ಕಾರದ ಬದ್ಧತೆ. ಈ ನಿಟ್ಟಿನಲ್ಲಿ ವಿಧೇಯಕದ ಅನುಮೋದನೆ ಚರಿತ್ರಾರ್ಹವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ 2021’ ಅನ್ನು ವಿಧಾನಸಭೆ ಅಂಗೀಕರಿಸಿದ್ದು, ನಮ್ಮ ಪಕ್ಷದ ಎಲ್ಲ ಶಾಸಕರನ್ನು ಅಭಿನಂದಿಸುತ್ತೇನೆ. ವಂಚನೆಯ, ಬಲವಂತದ ಅಥವಾ ಆಮಿಷದ ಮತಾಂತರ ಎನ್ನುವ ಪಿಡುಗನ್ನು ಕಿತ್ತೊಗೆಯಬೇಕು ಎನ್ನುವುದು ಪಕ್ಷದ ಹಾಗೂ ಸರ್ಕಾರದ ಬದ್ಧತೆ. ಈ ನಿಟ್ಟಿನಲ್ಲಿ ವಿಧೇಯಕದ ಅನುಮೋದನೆ ಚರಿತ್ರಾರ್ಹವಾಗಿದೆ.
— B.S. Yediyurappa (@BSYBJP) December 23, 2021
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post