ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಕ್ರಿಕೆಟ್ ಆಟದ ವೇಳೆ ಕ್ಷುಲ್ಲಕ ಕಾರಣಕ್ಕೆ ಉಂಟಾದ ಗಲಾಟೆ ಇಬ್ಬರ ಭೀಕರ ಹತ್ಯೆಯಲ್ಲಿ ಅಂತ್ಯವಾದ ದುರ್ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಶಿಂಧೋಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯ ಏರ್ಪಾಡಾಗಿತ್ತು. ಸಂಜೆ 7ರ ಸುಮಾರಿಗೆ ಯುವಕರು ಆಟವಾಡುತ್ತಿದ್ದರು.
ಇದೇ ವೇಳೆ ಹಾಲಿನ ಡೇರಿಯ ವಾಹನ ಓಡಿಸುವ ಚಾಲಕ ಇದೇ ಸ್ಥಳಕ್ಕೆ ಬಂದು ವಾಹನ ನಿಲ್ಲಿಸಿದ್ದು, ಈ ವೇಳೆ ಕ್ರಿಕೆಟ್ ಆಡುವ ಇಬ್ಬರು ಯುವಕರು ಹಾಗೂ ವಾಹನ ಚಾಲಕನ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದಿದೆ.
ಆದರೆ, ಇದು ಅಲ್ಲಗೇ ನಿಲ್ಲದೇ, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಒಬ್ಬರಿಗೊಬ್ಬರು ಹೊಡೆದಾಡತೊಡಗಿದ್ದಾರೆ. ಈ ವೇಳೆ ತನ್ನ ಬಳಿ ಇದ್ದ ಚಾಕು ತಂದ ಡೈರಿ ವಾಹನದ ಚಾಲಕ ಇಬ್ಬರೂ ಯುವಕರ ಮೇಲೆ ಹ¯್ಲೆ ಮಾಡಿದ. ಮನಸೋ ಇಚ್ಛೆ ಚುಚ್ಚಿದ ಎಂದು ಜತೆಯಲ್ಲಿದ್ದವರು ಮಾಹಿತಿ ನೀಡಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಳಲಿದ ಯುವಕರನ್ನು ಜಿ¯್ಲÁಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲೇ ಅವರ ಕೊನೆಯುಸಿರೆಳೆದಿದ್ದಾರೆ.
Also read: ಚೀನಾದಿಂದ ಬೆಂಗಳೂರಿಗೆ ಬಂದ ವ್ಯಕ್ತಿಯಲ್ಲಿ ಕೊರೋನಾ ಪತ್ತೆ: ಹೆಚ್ಚಿದ ಆತಂಕ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















