ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಗೃಹಲಕ್ಷ್ಮೀ ಯೋಜನೆಯ #Gruhalakshmi Scheme ಆಯ್ದ ಕೆಲವು ಫಲಾನುಭವಿಗಳೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ #Minister Lakshmi Hebbalkar ಸುವರ್ಣ ವಿಧಾನಸೌಧಕ್ಕೆ ಆಗಮಿಸಿದರು.
ಕುವೆಂಪು ನಗರದಲ್ಲಿರುವ ನಿವಾಸದಿಂದ ಸುವರ್ಣ ವಿಧಾನಸೌಧಕ್ಕೆ ವಿಶೇಷ ವಾಹನದಲ್ಲಿ ಫಲಾನುಭವಿಗಳೊಂದಿಗೆ ಸಚಿವರು ಆಗಮಿಸಿದರು.

Also read: ಶಿವಮೊಗ್ಗ | ಮೂರು ಕಾರುಗಳ ಮಧ್ಯೆ ಅಪಘಾತ | ಮಹಿಳೆ ಸಾವು, ಏಳು ಮಂದಿಗೆ ಗಾಯ
ಗೃಹಲಕ್ಷ್ಮೀಯರ ಜೊತೆಗೆ ತೃತೀಯ ಲಿಂಗಿಯರಿಗೂ ಗೃಹಲಕ್ಷ್ಮೀ ಯೋಜನೆಯ ಹಣ ತಲುಪಿಸುವ ಕೆಲಸ ಆಗುತ್ತಿದೆ. ಯೋಜನೆಯಿಂದ ಆದ ಲಾಭದ ಬಗ್ಗೆ ಫಲಾನುಭವಿಗಳು ಹೇಳಿಕೊಳ್ಳುವಾಗ ಯೋಜನೆ ಜಾರಿಗೆ ತಂದಿದ್ದಕ್ಕೂ ಸಾರ್ಥಕ ಎನಿಸುತ್ತದೆ. ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ತಲುಪಬೇಕು ಎಂಬುದೇ ನಮ್ಮ ಆಸೆ ಎಂದು ಸಚಿವರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ #CM Siddaramaiah ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ #DCM D K Shivakumar ಅವರೊಂದಿಗೆ ಗೃಹಲಕ್ಷ್ಮೀ ಫಲಾನುಭವಿಗಳು ಸಂವಾದ ನಡೆಸಲಿದ್ದು, ವಿಧಾನಸಭೆ ಅಧಿವೇಶನದ ಕಲಾಪ ವೀಕ್ಷಣೆ ಮಾಡುವುದಕ್ಕೂ ವ್ಯವಸ್ಥೆ ಮಾಡಲಾಗಿದೆ ಎಂದರು.

ಮಂಗಳಮುಖಿಯರು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ದೃಷ್ಟಿ ತೆಗೆದು ಶುಭ ಹಾರೈಸಿದರು.
ನಿಮ್ಮಿಂದ ನಮಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಸಿಗುತ್ತಿದೆ. ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ಸಚಿವರಿಗೆ ಕೈಮುಗಿದ ಧನ್ಯವಾದ ಅರ್ಪಿಸಿದರು.
ಸಚಿವರಿಗೆ ಹೊಸ ಬೈಕ್ ತೋರಿಸಿದ ಫಲಾನುಭವಿ
ಗೋಕಾಕ್ ತಾಲೂಕಿನ ಕೌಜಲಗಿ ಗ್ರಾಮದ ಬಾಗವ್ವ ಸಣ್ಣಕ್ಕಿ ಗೃಹಲಕ್ಷ್ಮಿಯ ಹಣ ಕೂಡಿಟ್ಟು, ಮಗನಿಗೆ ಬೈಕ್ ಕೊಡಿಸಲು ನೀಡಿರುವ ಹಿನ್ನೆಲೆಯಲ್ಲಿ ಅವರ ಮಗ ಬೆಳಗಾವಿಯ ಸಚಿವರ ನಿವಾಸಕ್ಕೆ ಆಗಮಿಸಿ, ಬೈಕ್ ತೋರಿಸಿ, ಖುಷಿ ಹಂಚಿಕೊಂಡರು.
ನಂತರ ಸಚಿವರು ಗೃಹಲಕ್ಷ್ಮೀಯರ ಜೊತೆಗೆ ಸುವರ್ಣ ವಿಧಾನಸೌಧಕ್ಕೆ ಆಗಮಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post