ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಕುವೆಂಪು ವಿಶ್ವವಿದ್ಯಾಲಯದಲ್ಲಿ ಸ್ಮಾರ್ಟ್ ಕ್ಲಾಸ್ ಅನುಷ್ಠಾನದಲ್ಲಿನ ಅನುದಾನ ಹಣ ದುರ್ಬಳಕೆ ಮಾಡಿರುವವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ DSArun ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಿಧಾನ ಪರಿಷತ್ ಅಧಿವೇಶನದಲ್ಲಿಂದು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, ಕುವೆಂಪು ವಿಶ್ವವಿದ್ಯಾನಿಲಯದಲ್ಲಿ 2021-22 ಮತ್ತು 2022-23 ಸಾಲಿನಲ್ಲಿ ಎಸ್’ಇಪಿಟಿಎಸ್’ಟಿ ಯೋಜನೆ ಅಡಿ ಸ್ಮಾರ್ಟ್ ಕ್ಲಾಸ್ ಅನುಷ್ಠಾನದಲ್ಲಿ 4.25 ಕೋಟಿ ರೂಪಾಯಿಗಳ ಹಣ ದುರ್ಬಳಕೆಯಾಗಿದೆ ಎಂದು ಆರೋಪಿಸಲಾಗಿತ್ತು. ಇದರ ಕುರಿತು ತನಿಖೆ ನಡೆಸಲು ಸ್ಮಾರ್ಟ್ ಕ್ಲಾಸ್ ಸಹಾಯಧನ ಸದ್ಬಲಿಕ ಪರಿಶೀಲನ ಸಮಿತಿ ರಚಿಸಲಾಗಿತ್ತು ಎಂದರು.
ಪ್ರಕರಣವನ್ನು ಪರಿಶೀಲಿಸಿದ ನಂತರ 17 ಪ್ರಕರಣಗಳಲ್ಲಿ ಲೋಪಗಳಾಗಿರುವುದು ಕಂಡುಬಂದಿದೆ ಎಂದರು.
Also read: ಐಸೀಸ್ ಸಂಪರ್ಕಿ ಮೌಲ್ವಿ ಜೊತೆ ವೇದಿಕೆಯಲ್ಲಿ ಸಿದ್ದರಾಮಯ್ಯ | ಎನ್’ಐಎ ತನಿಖೆಯಾಗಲಿ: ಬೊಮ್ಮಾಯಿ ಆಗ್ರಹ
ಈ ಎಲ್ಲಾ ಪ್ರಕರಣಗಳ ಬಗ್ಗೆ ಸರ್ಕಾರಕ್ಕೆ ಈಗಾಗಲೇ ಕೈಸೇರಿರುವ ವರದಿಯನ್ನು ಆದಷ್ಟು ಶೀಘ್ರ ಪರಿಶೀಲಿಸಿ ಹಣ ದುರುಪಯೋಗ ಅನುದಾನ ದುರ್ಬಳಕೆ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ರೀತಿ ಶಿಸ್ತು ಕ್ರಮವನ್ನು ಕೈಗೊಳ್ಳಬೇಕು. ಈ ಮೂಲಕ ಕುವೆಂಪು ವಿಶ್ವವಿದ್ಯಾನಿಲಯದ ಘನತೆಯನ್ನು ಎತ್ತಿ ಹಿಡಿಯುವ ಪ್ರಯತ್ನ ಸರ್ಕಾರ ನಡೆಸಬೇಕು ಎಂದು ಒತ್ತಾಯಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post