ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಇಲ್ಲಿನ ಸುವರ್ಣಸೌಧದಲ್ಲಿ Suvarna Soudha ಇಂದಿನಿಂದ ವಿಧಾನ ಮಂಡಲ ಚಳಿಗಾಲದ ಅಧಿವೇಶನ ಆರಂಭಗೊಂಡಿದ್ದು, ಇದಕ್ಕೂ ಮೊದಲು ವೀರ ಸಾವರ್ಕರ್ ಸೇರಿದಂತೆ ಏಳು ಮಹನೀಯರ ಫೋಟೋಗಳನ್ನು ಅನಾವರಣಗೊಳಿಸಲಾಗಿದೆ.
ಸುವರ್ಣಸೌಧದ ವಿಧಾನಸಭೆಯಲ್ಲಿ ವೀರ ಸಾರ್ವರ್ಕರ್ Savarkar ಸೇರಿದಂತೆ ಮಹಾತ್ಮ ಗಾಂಧೀಜಿ, Mahthma Gandhiji ವಲ್ಲಭಬಾಯ್ ಪಟೇಲ್, ಅಂಬೇಡ್ಕರ್, ನೇತಾಜಿ, ಸ್ವಾಮಿ ವಿವೇಕಾನಂದ ಹಾಗೂ ಬಸವಣ್ಣ ಅವರುಗಳ ಫೋಟೋವನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾರಿ CM Basavaraja Bommai ಅವರುಗಳು ಅನಾವರಣಗೊಳಿಸಿದರು.

ಇನ್ನು, ವೀರ ಸಾವರ್ಕರ್ ಫೋಟೋವನ್ನು ಹಾಕಿರುವುದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದು, ಸುವರ್ಣ ಸೌಧದ ಮೆಟ್ಟಿಲುಗಳ ಮೇಲೆ ಮೊದಲು ಪ್ರತಿಭಟನೆ ನಡೆಸಿತು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕುವೆಂಪು, ಶಿಶುನಾಳ ಶರೀಫ್, ನಾರಾಯಣ ಗುರು ಸೇರಿದಂತೆ ಹಲವರ ಫೋಟೋ ಹಿಡಿದು ಎಲ್ಲರ ಫೋಟೋ ಹಾಕುವಂತೆ ಒತ್ತಾಯಿಸಿದೆ. ಅಲ್ಲದೇ, ಸಾವರ್ಕರ್ ಫೋಟೋ ಹಾಕಿದ್ದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.

ಆದರೆ, ಇದಕ್ಕೆ ತದ್ವಿರುದ್ದವಾಗಿ ಹೇಳಿಕೆ ನೀಡಿರುವ ಅವರದೇ ಪಕ್ಷದ ಮಾಜಿ ಸಿಎಂ ಸಿದ್ದರಾಮಯ್ಯ, ಸಾವರ್ಕರ್ ಫೋಟೋ ಹಾಕಿದ್ದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಬೇರೆ ದಾರ್ಶನಿಕರು ಹಾಗೂ ಹೋರಾಟಗಾರರ ಫೋಟೋಗಳನ್ನೂ ಸಹ ಹಾಕಬೇಕು ಎಂದರು.
ನಾವು ನಡೆಸುತ್ತಿರುವುದು ಹೋರಾಟವಲ್ಲ. ಬದಲಾಗಿ ನಮ್ಮದು ಬೇಡಿಕೆಯಾಗಿದೆ ಎಂದರು.













Discussion about this post