ಬೆಳಗಾವಿ: ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲ ಅಣೆಕಟ್ಟೆಗಳು ಸಂಪೂರ್ಣವಾಗಿ ಭರ್ತಿಯಾಗಿದ್ದು, ಯಾವುದೇ ಕ್ಷಣದಲ್ಲಿ ತುಂಬಿ ಹರಿಯುವ(ಓವರ್ ಫ್ಲೋ) ಆಗಲಿದ್ದು, ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಜಿಲ್ಲೆಯ ಎಲ್ಲ ಅಣೆಕಟ್ಟೆಗಳು ಯಾವುದೇ ಕ್ಷಣದಲ್ಲಿ ಓವರ್ ಫ್ಲೋ ಆಗುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರನ್ನು ಈಗಾಗಲೇ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.
ಯಾವುದೇ ರೀತಿಯ ಕ್ಲಿಷ್ಟ ಪರಿಸ್ಥಿತಿಯನ್ನು ಎದುರಿಸಲು ರಕ್ಷಣಾ ತಂಡಗಳು ಸಿದ್ಧವಾಗಿದ್ದು, ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ರೀತಿಯ ತುರ್ತು ಪರಿಸ್ಥಿತಿಗೆ ಈ ಕೆಳಗಿನ ದೂರವಾಣಿಗಳಿಗೆ ಸಂಪರ್ಕಿಸಿ:
ಡಿಸಿ ಕಚೇರಿ: 0831-2407290,
ಎಸ್‌ಪಿ ಕಚೇರಿ: 0831-2405231
ಚಿಕ್ಕೋಡಿ ತಹಶೀಲ್ದಾರ್ ಕಚೇರಿ: 08338-272228
ರಾಯಭಾಗ ತಹಶೀಲ್ದಾರ್ ಕಚೇರಿ: 08331-225482
ಅಥಣಿ ತಹಶೀಲ್ದಾರ್ ಕಚೇರಿ: 08289-251146
ನಿಪ್ಪಾಣೀ ತಹಶೀಲ್ದಾರ್ ಕಚೇರಿ: 08338-220395
Discussion about this post