ಬೆಳಗಾವಿ: ಅಥಣಿ ತಾಲೂಕು ಶಿವಯೋಗಿ ನಗರ ಮೋಟಗಿ ತೋಟ ಶಾಲೆಯಲ್ಲಿ ಸ್ವತಂತ್ರ ಹೋರಾಟಗಾರ ಭಗತ್ ಸಿಂಗ್ ಅವರ ನೆನಪಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ತನ್ನಿಮಿತ್ತ ಗೆಳೆಯರ ಬಳಗದ ವತಿಯಿಂದ ಎಂ ಎಸ್ ಮೇಲೋಡಿಸ ಇವರ ತಂಡದಿಂದ ಶಂಕರ್, ಅಥಣಿ ಜಾನಪದ ಗಾಯಕ ಸುರೇಶ್ ಇಂಚಗೇರಿ, ಖ್ಯಾತ ಜಾನಪದ ಗಾಯಕಿ ಜಯಶ್ರೀ ತೋಡಕರ ಕಿರಣ್ ಗುರವ, ಸಚಿನ್ ಅವಟಿ, ದೀಪಾ ಹಳಿಯಾಳ,ಆರ್ ಕಿರಣಗಿ ಅವರ ಸಂಜೆ ಸಂಗೀತ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಸ್ವತಂತ್ರ ಹೋರಾಟಗಾರ ಭರತ್ ಸಿಂಗ್ ದಿನಾಚರಣೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಕಲಾವಿದರಿಗೆ ಹಾಗೂ ಮಾಧ್ಯಮದವರಿಗೆ ಸನ್ಮಾನ ಮಾಡಲಾಯಿತು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ಮರುಳಸಿದ್ಧ ಮಹಾಸ್ವಾಮಿಗಳು ಮಾತನಾಡಿ. ಎಂ.ಎಸ್. ಮೇಲೋಡಿಸ್ ಇವರ ತಂಡದಿಂದ ಇದು ಇನ್ನೂ ಉನ್ನತ ಮಟ್ಟಕ್ಕೆ ಹೋಗಲಿ. ಇದು ಕರ್ನಾಟಕದ ಭಾರತ ಹಾಗೂ ಮತ್ತು ಇತರ ಹೆಸರು ಮಾಡಲು ಮನೆ ಮನೆ ಮಾತಾಡಲಿ ಎಂದು ಶುಭ ಹಾರೈಸಿದರು.
ಸದಾಶಿವ ಹನುಮಂತ, ಮಲ್ಲಿಕಾರ್ಜುನ್ ಬುಟಾ, ಚಿದಾನಂದ ಹಳ್ಳದಮಳ, ಸಿ.ಎಸ್. ಕೋಟ್ಯಾಳ, ಮೋಟಗಿ ತೋಟ ಅಥಣಿ, ದೈಹಿಕ ಶಿಕ್ಷಕ ಬಿ.ಡಿ. ಮೂಲಿಮನಿ, ಬಸವರಾಜ್ ಹಳ್ಳದಮಳ, ಲಕ್ಷ್ಮಣ್ ಬಕಾರಿ, ರಾಜು ಹಳ್ಳದಮಳ, ಸುರೇಶ್ ಆಲಬಾಳ, ಸುರೇಶ್ ಜೋಗಾನಿ, ಮಲ್ಲು ಶೇಡಬಾಳ, ಗಂಗಾಧರ್ ಹಿರೇಮಠ್, ಪ್ರಶಾಂತ್ ದಿವಾನಮಳ, ಕೆ ದಾರಿ ಹಳ್ಳದಮಳ, ಮನಸು ಡಾಂಗೆ, ವೀರೇಶ್ ಶೇಡಬಾಳ ಉಪಸ್ಥಿತರಿದ್ದರು.
Discussion about this post