ಕಲ್ಪ ಮೀಡಿಯಾ ಹೌಸ್
ಬಳ್ಳಾರಿ/ ವಿಜಯನಗರ: ಅವಳಿ ಜಿಲ್ಲೆಗಳಲ್ಲಿ ಕೊರೋನ ಪ್ರಕರಣಗಳು ದಾಖಲೆ ಮಟ್ಟದಲ್ಲಿ ಹೆಚ್ಚುತ್ತಿದ್ದು, ಸಾವಿಗೀಡಾಗುತ್ತಿರುವವರ ಸಂಖ್ಯೆಯು ದಿನೇದಿನೇ ಹೆಚ್ಚುತ್ತಿದೆ. ಜನರ ಜೀವ ಉಳಿಸಲು ಜೀವಸಂಜೀವಿನಿಯಂತೆ ಜಿಂದಾಲ್ ಸಂಸ್ಥೆ ಕಳೆದ 15 ದಿನದಲ್ಲಿ ನಿರ್ಮಾಣ ಮಾಡಿರುವ 1000 ಹಾಸಿಗೆಯ ಬೃಹತ್ ಕೋವಿಡ್ ಆಸ್ಪತ್ರೆಯನ್ನು ಇಂದು ಸಂಜೆ ಮುಖ್ಯಮಂತ್ರಿ ಯಡಿಯೂರಪ್ಪ ಆನ್‌ಲೈನ್ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮ ಸಾಮಾಜಿಕ ಅಂತರದಿಂದ ಸರಳವಾಗಿ ನಡೆಯಿತು. ಮುಖ್ಯಮಂತ್ರಿ ಯಡಿಯೂರಪ್ಪ ಈ ಸಂದರ್ಭದಲ್ಲಿ ಅನಂದ್ ಸಿಂಗ್ ಹಾಗೂ ಸಜ್ಜನ್ ಜಿಂದಾಲ್ ರವರಿಗೆ ಅಭಿನಂದನೆ ಸಲ್ಲಿಸಿದರು. ಬಳ್ಳಾರಿ ಜಿಲ್ಲಾಡಳಿತ ಇದನ್ನು ಇನ್ನುಮುಂದೆ ಮುಂದುವರೆಸಿಕೊಂಡು ಹೋಗುತ್ತದೆ. ಈ ಭಾಗದ ಜನರಿಗೆ ಇದರಿಂದ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಸುಮಾರು 4.8 km ದೂರದಿಂದ ಆಕ್ಸಿಜನ್ ಪೈಪ್ ಲೈನ್ ವ್ಯವಸ್ಥೆ ಮಾಡಿ ಕೇವಲ 15 ದಿನದಲ್ಲಿ ಈ ಕೆಲಸವನ್ನು ಪೂರ್ಣಮಾಡಿ 24 ಗಂಟೆ ಸತತವಾಗಿ ಆಕ್ಸಿಜನ್ ಪೂರೈಕೆಯನ್ನು ಮಾಡಿ ಜನರ ಆರೋಗ್ಯ ಕಾಪಾಡಲು ಶ್ರಮಿಸಲಾಗಿದೆ ಈ ಕಾರ್ಯ ಜಿಲ್ಲಾಡಳಿತದ ಸಹಾಯ ಮಮತ್ತು ಆನಂದ್ ಸಿಂಗ್ ರವರ ಪೂತ್ಸಾಹದಿಂದ ನೇರವೇರಿದೆ ಎಂದು ಸಜ್ಜನ್ ಜಿಂದಾಲ್ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜಿಂದಾಲ್ ಸಂಸ್ಥೆಯ ಚೇರ್ಮನ್ ಸಜ್ಜನ್ ಜಿಂದಾಲ್ ಮತ್ತು ಸಂಗೀತಾ ಜಿಂದಾಲ್ ಜಿಲ್ಲಾ ಉಸ್ತುವಾರಿ ಸಚಿವ ಅನಂದ್ ಸಿಂಗ್ , ಜಗದೀಶ ಶೆಟ್ಟರ್, ಆರೋಗ್ಯ ಸಚಿವರಾದ ಸುಧಾಕರ್, ವಿನೂದ್ ನಾವೆಲ್ , ಸೂಂಡುರ್ ಶಾಸಕ ತುಕರಾಮ್, ಬಳ್ಳಾರಿ ಜಿಲ್ಲಾಧಿಕಾರಿ ಪವನ್ ಕುಮಾರ್ , ಸಿ ಇ.ಓ ನಂದಿನಿ ಹಾಗೂ ಜಿಂದಾಲ್ ಸಂಸ್ಥೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ವರದಿ: ಮುರುಳೀಧರ್ ನಾಡಿಗೇರ್, ಹೊಸಪೇಟೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post