ಕಲ್ಪ ಮೀಡಿಯಾ ಹೌಸ್
ಬಳ್ಳಾರಿ: ನಗರದ 39 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಪೈಕಿ, ಕಾಂಗ್ರೆಸ್ 21 ಸ್ಥಾನಗಳಲ್ಲಿ ಜಯ ಗಳಿದ್ರೆ, ಬಿಜೆಪಿ 13 ಹಾಗೂ 5 ಸ್ಥಾನಗಳಲ್ಲಿ ಇತರ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಗಣಿನಾಡು ಬಳ್ಳಾರಿ ಅಂದ್ರೆ ರೆಡ್ಡಿ ಬ್ರದರ್ಸ್ ಜೊತೆ ಶ್ರೀರಾಮುಲು. ಬಿಜೆಪಿಯ ಭದ್ರಕೋಟೆ. ಆದ್ರೆ, ಇದೀಗ ನಗರಸಭೆ ಚುನಾವಣೆಯಲ್ಲಿ ಕಮಲ ಕಡಿಮೆ ಸ್ಥಾನ ಗಳಿಸಿ ನೆಲಕಚ್ಚಿದ್ದು, ಬಿಜೆಪಿಗೆ ಭಾರಿ ಮುಖಭಂಗವಾಗಿದೆ.
ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಇದರಲ್ಲಿ ಕಾಂಗ್ರೆಸ್ ಜಯಭೇರಿ ಗಳಿಸಿದ್ದರೇ, ಬಿಜೆಪಿಗೆ ಮರ್ಮಾಘಾತವಾಗಿದೆ. ಕೊರೋನಾ ಆತಂಕದ ಮಧ್ಯೆ ಚುನಾವಣೆ ಪ್ರಚಾರ ಮಾಡಲು ಹೆಚ್ಚಾಗಿ ಬರಲು ಸಾಧ್ಯವಾಗದೆ ಈ ರೀತಿ ಆಗಿದೆ ಎಂದು ಶ್ರೀರಾಮುಲು ಸ್ಪಷ್ಟನೆ ತಿಳಿಸಿದ್ದಾರೆ.
ಈ ಬಾರಿ ಬಳ್ಳಾರಿ ಮಹಾನಗರ ಪಾಲಿಕೆಗೆ 22ರ ವಯಸ್ಸಿನ ಯುವತಿ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾಳೆ.ಅತಿ ಕಿರಿಯ ವಯಸ್ಸಿನಲ್ಲೇ ಮೊದಲ ಬಾರಿಗೆ ಬಳ್ಳಾರಿ ಮಹಾನಗರ ಪಾಲಿಕೆ ಪ್ರವೇಶಿಸಿದ ತ್ರಿವೇಣಿ, ಕಳೆದ ಬಾರಿ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತೃತೀಯ ಲಿಂಗಿಯೊಬ್ಬರು ಗೆಲುವ ಸಾಧಿಸುವ ಮೂಲಕ ಗಮನ ಸೆಳೆದಿದ್ದರು. ಈ ಬಾರಿ 4ನೇ ವಾರ್ಡ್ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ 22 ವರ್ಷದ ಯುವತಿ ತ್ರಿವೇಣಿ ಜಯ ಸಾಧಿಸಿದ್ದಾರೆ
ವರದಿ: ಮುರುಳೀಧರ್ ನಾಡಿಗೇರ್, ಹೊಸಪೇಟೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post