ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಲಾಕ್ ಡೌನ್ ಹಿನ್ನೆಲೆಯಲ್ಲಿ ತಾಲೂಕು ಶಾಸಕರ ಭವನದಲ್ಲಿ ಉಚಿತ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಶಾಸಕ ಟಿ. ರಘುಮೂರ್ತಿ ಚಾಲನೆ ನೀಡಿದರು.
ಈ ಸಂದರ್ಭದಲ್ಲ ಮಾತನಾಡಿದ ಅವರು, ರಾಜ್ಯಾದ್ಯಂತ ಕೊರೋನಾ ಎರಡನೆಯ ಅಲೆ ಮರಣ ಮೃದಂಗ ಮುಂದುವರೆದಿದ್ದು, ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಲಾಕ್‌ಡೌನ್ ಮಾದರಿಯ ಜನತಾಕರ್ಫ್ಯೂ ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಉಪಹಾರ ಹೋಟೆಲ್‌ಗಳನ್ನು ತೆರೆಯದಂತೆ ಬಂದ್ ಮಾಡಿಸಲಾಗಿದ್ದು, ಕೋರೊನಾ ವಾರಿಯರ್‌ಗಳಾಗಿ ಕಾರ್ಯ ನಿರ್ವಹಿಸುವ ಹಲವು ಕಚೇರಿಗಳ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಸೇರಿದಂತೆ ಅನೇಕರು ಊಟ ಸಿಗದೆ ಕಂಗಾಲಾಗಿದ್ದಾರೆ. ಕ್ಷೇತ್ರದ ಜನರ ಹಸಿವನ್ನು ತಣಿಸುವ ಸಲುವಾಗಿ ಚಳ್ಳಕೆರೆ ಶಾಸಕರ ಭವನದಲ್ಲಿ ಉಚಿತ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಏಳು ವರ್ಷಗಳಿಂದ ಈ ಅನ್ನ ಸಂತರ್ಪಣೆ ಕಾರ್ಯ ಮಾಡಿಕೊಂಡು ಬಂದಿದ್ದು ಕಳೆದ ವರ್ಷದ ಕೊರೋನಾ ಸಂಕಷ್ಟದಲ್ಲಿಯೂ ಸಹ ಹಲವು ದಿನಗಳ ಕಾಲ ಅನ್ನಸಂತರ್ಪಣೆ ಕಾರ್ಯ ಮುಂದುವರೆಸಿದ್ದು, ಈಗ 4ತಿಂಗಳಿನಿಂದ ಈ ಕಾರ್ಯ ಸ್ಥಗಿತಗೊಳಿಸಲಾಗಿತ್ತು ಎಂದರು.
ಲಾಕ್‌ಡೌನ್ ಪರಿಣಾಮ ನಗರದ ಎಲ್ಲಾ ಅಂಗಡಿಗಳು, ಹೊಟೆಲ್‌ಗಳು ಮುಚ್ಚಿರುವ ಇತಂಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೊರೋನಾ ವಾರಿಯರ್‍ಸ್‌ಗೆ ತೊಂದರೆಯಾಗಬಾರದು ಎಂದು ನಗರದ ಶಾಸಕರಭವನದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ಪಾರಂಭಿಸಲಾಗಿದೆ. ಕರ್ಫ್ಯೂ ಮುಗಿಯುವವರೆಗೂ ಇದು ಮುಂದುವರೆಯಲಿದೆ. ಕೊರೋನಾ ವಾರಿಯರ್‍ಸ್, ಅಧಿಕಾರಿಗಳು, ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಈ ಅವಕಾಶವನ್ನು ಸದುಪಯೋಗಪಡಿಕೊಳ್ಳುವಂತೆ ಶಾಸಕ ಟಿ.ರಘುಮೂರ್ತಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ತಿಪ್ಪೇಸ್ವಾಮಿ, ಸದಸ್ಯ ಎಚ್. ಆಂಜನೇಯ, ಜೆ. ವಿರೇಶ, ನಗರಸಭೆ ಸದಸ್ಯ ವೈ. ಪ್ರಕಾಶ, ವಿರೂಪಾಕ್ಷ, ಮುಖಂಡರಾದ ಎಚ್.ಎಸ್. ಸೈಯಾದ್ ಅನ್ವರ್ ಸಾಬ್, ಕೃಷ್ಣಾ, ಹನುಂತಪ್ಪ, ಮಂಜುನಾಥ ಗುರುಸ್ವಾಮಿ, ಸತ್ಯನಾರಾಯಣ ರೆಡ್ಡಿ, ಮಹಮದ್ ಸೈಪ್ ಹಾಗೂ ನಗರಸಭೆ ಸಿಬ್ಬಂದಿಗಳು ಇದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post