ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೇಲೂರು: ಪರವಾನಗಿ ಇಲ್ಲದೆ ಅಕ್ರಮವಾಗಿ ಹಸುಗಳನ್ನು ಕಸಾಯಿಖಾನೆಗೆ ಸಾಗಿಸಲು ತಾಲೂಕಿನ ಹನಿಕೆ ಗ್ರಾಮದ ಮನೆಯೊಂದರಲ್ಲಿ ಶೇಖರಿಸಿದ್ದ 70 ಗೋವುಗಳನ್ನು ಬೇಲೂರು ಪೋಲಿಸರು ರಕ್ಷಿಸಿದ್ದಾರೆ.
ಹನಿಕೆ ಗ್ರಾಮದ ಮನೆಯೊಂದರಲ್ಲಿ ಗೋವುಗಳನ್ನು ಕಸಾಯಿಖಾನೆಗೆ ಸಾಗಿಸಲು ಗೋವುಗಳನ್ನು ಶೇಖರಣೆ ಮಾಡಿದ್ದಾರೆಂಬ ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿದ ಬೇಲೂರು ಪಿಎಸ್‌ಐ ಅಜಯ್ ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳು ಗ್ರಾಮದಲ್ಲಿ ಪರಿಶೀಲನೆ ನಡೆಸಿದಾಗ ಅಕ್ರಮವಾಗಿ ಹಸುಗಳನ್ನು ಮನೆಯೊಂದರಲ್ಲಿ ಕೂಡ ಹಾಕಿರುವುದು ಕಂಡುಬಂದಿದೆ.
ಬಳಿಕ ಗೋವುಗಳನ್ನು ವಶಕ್ಕೆ ಪಡೆದು, ಬಾಣಾವರದ ಗೋಶಾಲೆಗೆ ಕಳಿಸಲಾಗಿದೆ. ಬೇಲೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂದರ್ಭ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ತಾಲೂಕು ಯುವ ಘಟಕದ ಅಧ್ಯಕ್ಷ ಸತೀಶ್, ಪ್ರತಿವಾರ ದನಗಳ ಸಂಸ್ಥೆಯಾದ ಹನಿಕೆ ಸಂತೆಯಲ್ಲಿ ಗೋವುಗಳನ್ನು ದಲ್ಲಾಳಿಗಳು ಖರೀದಿ ಮಾಡಿ ಕೇರಳ ಮತ್ತಿತರ ಭಾಗಗಳಿಗೆ ರವಾನೆ ಮಾಡುತ್ತಾರೆ. ನಂತರ ಅವುಗಳನ್ನು ಕಸಾಯಿಖಾನೆಯಲ್ಲಿ ಗೋವುಗಳನ್ನು ಕತ್ತರಿಸುವ ಕೆಲಸವನ್ನು ಮಾಡುತ್ತಾರೆ. ಇಲ್ಲಿಯ ಕೆಲವರು ಕುಮ್ಮಕ್ಕಿನಿಂದಾಗಿ ಗೋವುಗಳನ್ನು ಪಡೆದು ರವಾನಿಸುತ್ತಿದ್ದಾರೆ. ಅದರಂತೆ ಭಾನುವಾರ ಸಂಜೆ ಪೊಲೀಸರ ಜೊತೆಯಲ್ಲಿ ದಾಳಿ ನಡೆಸಿದಾಗ ಚಿಕ್ಕಮಗಳೂರಿಗೆ ಒಬ್ಬ ವ್ಯಕ್ತಿಗೆ ಸೇರಿದಂತೆ ಸುಮಾರು 70ಕ್ಕೂ ಹೆಚ್ಚು ರಾಸುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಐದಕ್ಕೂ ಹೆಚ್ಚು ರಾಸುಗಳು ಮೃತಪಟ್ಟಿದ್ದು ತಕ್ಷಣ ಯಾರು ತಪ್ಪಿಸುತ್ತಿದ್ದಾರೆ, ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
Get in Touch With Us info@kalpa.news Whatsapp: 9481252093
Discussion about this post