ಕಲ್ಪ ಮೀಡಿಯಾ ಹೌಸ್ | ಬೇಲೂರು |
ಇಲ್ಲಿನ ಬ್ರಹ್ಮರಥೋತ್ಸವದ ವೈಭವ ಒಂದೆಡೆಯಾದರೆ, ನಗರದಾದ್ಯಂತ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ Power star Puneeth Rajkumar ಗುಣಗಾನ ಕಂಡುಬಂದಿದ್ದು ವಿಶೇಷವಾಗಿತ್ತು. ದೇವಾಲಯದ ಬಳಿ ಇರುವ ಬಯಲು ರಂಗಮಂದಿರದಲ್ಲಿ ನಿನ್ನೆ ರಾತ್ರಿ ಪುನೀತ್ ನೆನಪು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಚಿತ್ರನಟಿ ಜಯಶ್ರೀ ಸೇರಿ ಹಲವು ಜಿಲ್ಲಾ ಮುಖಂಡರು ಪಾಲ್ಗೊಂಡಿದ್ದರು.
ವೇದಿಕೆಯಲ್ಲಿ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಗೀತೆಗೆ ಪುನೀತ್ ಅವರ ವಿವಿಧ ಭಾವಚಿತ್ರಗಳನ್ನು ಪ್ರದರ್ಶಿಸಿದ್ದು, ಅಲ್ಲಿ ನೆರೆದಿದ್ದವರ ಶಿಲ್ಲೆ ಹಾಗೂ ಕೇಕೆ ಕಿಲೋ ಮೀಟರ್‌ವರೆಗೂ ಕೇಳುತ್ತಿತ್ತು. ಇಡಿಯ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಪುನೀತ್ ವ್ಯಕ್ತಿತ್ವದ ಗುಣಗಾನ ಮಾಡಲಾಯಿತು. ಇದೇವೇಳೆ ಪುನೀತ್ ಸ್ಮರಣಾರ್ಥ ಅವರ ಭಾವಚಿತ್ರವುಳ್ಳ ಬೃಹತ್ ಗಾತ್ರದ ಬಲೂನ್‌ವೊಂದನ್ನು ಜಾತ್ರೆಯ ಪ್ರದೇಶದಲ್ಲಿ ನೆನ್ನೆಯಿಂದಲೇ ಹಾರಾಡಿಸುತ್ತಿರುವುದು ಭಕ್ತರ ಗಮನ ಸೆಳೆಯಿತು.
ಇಂದು ರಥೋತ್ಸವದ ವೇಳೆ ಬಾಳೆಹಣ್ಣಿನ ಮೇಲೆ ಪುನೀತ್ ಹೆಸರು ಬರೆದು ಘೋಷಣೆ ಕೂಗಿ ರಥದಲ್ಲಿದ್ದ ದೇವರ ಕಡೆ ತೂರುತ್ತಿದ್ದ ಪ್ರಸಂಗವೂ ಕಂಡುಬಂದಿತು. ಒಟ್ಟಿನಲ್ಲಿ ಪುನೀತ್ ರಾಜ್‌ಕುಮಾರ್ ಕಾಲವಾಗಿ ತಿಂಗಳುಗಳೇ ಕಳೆದರೂ ಪ್ರತೀ ಸಾರ್ವಜನಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲೂ ಅವರ ಮೇಲಿನ ಅಭಿಮಾನ ಹೆಚ್ಚಾಗುತ್ತಲೇ ಇರುವುದು ವಿಶೇಷ.
Also read: ಬೇಲೂರು ಚನ್ನಕೇಶವ ಸ್ವಾಮಿ ಅದ್ಧೂರಿ ರಥೋತ್ಸವ: ಹರಿದು ಬಂದ ಭಕ್ತಸಾಗರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post