ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ತಾಲೂಕಿನ ಹುಚ್ಚರಾಯಸ್ವಾಮಿ ದೇವಸ್ಥಾನದ Shikaripura Huchurayaswamy Temple ಶ್ರೀ ಸ್ವಾಮಿಯ ಬ್ರಹ್ಮ ರಥೋತ್ಸವವು ಏ.16ರ ಶನಿವಾರ ಬೆಳಿಗ್ಗೆ 8:40ಕ್ಕೆ ನಡೆಯಲಿದೆ.
ಈ ಸಂದರ್ಭದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ಪುರಸಭೆ ಅಧ್ಯಕ್ಷೆ ಲಕ್ಷ್ಮೀ ಮಹಾಲಿಂಗಪ್ಪ ಸೇರಿದಂತೆ ತಾಲೂಕಿನ ಇನ್ನಿತರ ಗಣ್ಯರು ಉಪಸ್ಥಿತರಿರಲಿದ್ದಾರೆ.

17ರ ಭಾನುವಾರ ಸಂಜೆ ಮಹಾರಥವು ಸಕಲ ವಾದ್ಯಗಳೊಡನೆ ಹೊರಟು ವಾಪಾಸು ಸ್ವಸ್ಥಾನದಲ್ಲಿ ನಿಲ್ಲಲಿದೆ. ನಂತರ ಶ್ರೀ ಹುಚ್ಚುರಾಯಸ್ವಾಮಿ ಕೆರೆಯಲ್ಲಿ ಭಾರಿ ಸಿಡಿಮದ್ದು ಕಾರ್ಯಕ್ರಮದೊಡನೆ ಶ್ರೀಸ್ವಾಮಿ ತೆಪ್ಪೋತ್ಸವವು ಬಹು ವಿಜೃಂಭಣೆಯಿಂದ ನೆರವೇರಲಿದೆ.
Also read: ಬೇಲೂರು ಬ್ರಹ್ಮರಥೋತ್ಸವದಲ್ಲಿ ಅಪ್ಪು ನೆನಪು: ಎಲ್ಲೆಲ್ಲೂ ಪುನೀತ್ ರಾಜ್‌ಕುಮಾರ್ ಗುಣಗಾನ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















