ಕಲ್ಪ ಮೀಡಿಯಾ ಹೌಸ್ | ಬೇಲೂರು |
ವಿಶ್ವ ವಿಖ್ಯಾತ ಬೇಲೂರು ಶ್ರೀ ಚೆನ್ನಕೇಶವ ಸ್ವಾಮಿ ಬ್ರಹ್ಮ ರಥೋತ್ಸವ ಇಂದು ಅದ್ದೂರಿಯಾಗಿ ನೆರವೇರಿತು.
ರಥೋತ್ಸವ ಅಂಗವಾಗಿ ಇಂದು ನಸುಕಿನಿಂದಲೇ ಮೂಲ ದೇವರಿಗೆ, ಸೌಮ್ಯ ನಾಯಕಿ, ರಂಗ ನಾಯಕಿ ದೇವರಿಗೆ ವಿಶೇಷ ಅಭಿಷೇಕ, ಅಲಂಕಾರ, ವಿಶೇಷ ಪೂಜೆ ನೆರವೇರಿತು.

Also read: ಹಿಂದೂಗಳ ಮೇಲೆ ನಿರಂತರ ದಾಳಿ: ಸಂಸದ ರಾಘವೇಂದ್ರ, ಶಾಸಕ ಚನ್ನಬಸಪ್ಪ ಆಕ್ರೋಶ
ರಾಜ್ಯ, ದೇಶ ಹಾಗೂ ವಿದೇಶಗಳಿಂದಲೂ ಆಗಮಿಸಿದ್ದ ಭಕ್ತರು ನಸುಕಿನಿಂದಲೇ ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದರು. ಆಗಮಿಸಿದ್ದ ಭಕ್ತರಿಗೆ ದೇವಾಲಯದ ವತಿಯಿಂದ ಅನ್ನ ಸಂತರ್ಪಣೆ ನಡೆಯಿತು.

ಇನ್ನು ಸಾಮಾನ್ಯವಾಗಿ ಬೇಸಿಗೆ ಆದ ಕಾರಣ ರಥೋತ್ಸವ ವೇಳೆ ಬಿರು ಬಿಸಿಲು ಸುಡುತ್ತದೆ. ಆದರೆ, ನಿನ್ನೆಯಿಂದ ಮೋಡ ಕವಿದ ವಾತಾವರಣ ಹಾಗೂ ನಿನ್ನೆ ರಾತ್ರಿ ಭಾರಿ ಮಳೆ ಸುರಿದ ಪರಿಣಾಮ ಇಂದು ವಾತಾವರಣ ತಂಪಾಗಿದ್ದು, ಭಕ್ತರು ಹೆಚ್ಚು ಸಂತಸದಿಂದ ಪಾಲ್ಗೊಂಡಿದ್ದರು.
ಮಧ್ಯ ರಾತ್ರಿ ಗರುಡೋತ್ಸವ
ನಿನ್ನೆ ರಾತ್ರಿ ಶ್ರೀ ಸ್ವಾಮಿಯ ಗರುಡೋತ್ಸವ ಅದ್ದೂರಿಯಾಗಿ ನಡೆಯಿತು. ರಾತ್ರಿ 12.45 ಕ್ಕೆ ಅಲಂಕೃತ ಗರುಡ ದೇವರ ಮೇಲೆ ಉತ್ಸವ ಮೂರ್ತಿ ಇರಿಸಿ ರಥ ಬೀದಿಯಲ್ಲಿ ಉತ್ಸವ ಮಾಡಲಾಯಿತು. ತಡ ರಾತ್ರಿಯದರೂ ಲೆಕ್ಕಿಸದೆ ಸಾವಿರಾರು ಭಕ್ತರು ಗರುಡೋತ್ಸವ ಕಣ್ತುಂಬಿಕೊಳ್ಳಲು ನೆರೆದಿದ್ದು ವಿಶೇಷವಾಗಿತ್ತು.

ನಾಳೆ ಭಾನುವಾರ ಶ್ರೀ ಸ್ವಾಮಿಯ ನಾಡ ರಥೋತ್ಸವ ನಡೆಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post