ಕಲ್ಪ ಮೀಡಿಯಾ ಹೌಸ್ | ಬೇಲೂರು |
ಎಟಿಎಂನಿಂದ #ATM ಹಣ ಬಿಡಿಸಿಕೊಡುವುದಾಗಿ ವೃದ್ದೆಗೆ ವಂಚನೆ ಮಾಡಿರುವ ಘಟನೆ ಪಟ್ಟಣದ ಎಸ್ ಬಿ ಐ ಬ್ಯಾಂಕ್ #SBM Bank ಎಟಿಎಂನಲ್ಲಿ ನಡೆದಿದೆ.
ಮೂಡಿಗೆರೆ ತಾಲೂಕಿನ ಜನ್ನಾಪುರ ಗ್ರಾಮದ ಪವಿತ್ರ ಎಂಬ ಮಹಿಳೆ ತಮ್ಮ ಮೊಮ್ಮಗನೊಂದಿಗೆ ಆಸ್ಪತ್ರೆಗೆ ಬಂದಿದ್ದರು. ಇದೇ ವೇಳೆ ತುರ್ತಾಗಿ ಅವರಿಗೆ ಹಣದ ಅವಶ್ಯಕತೆ ಇದ್ದಿದ್ದರಿಂದ ಪಕ್ಕದ ಎಸ್ ಬಿ ಐ ಬ್ಯಾಂಕ್ ನ ಎಟಿಎಮ್ ಗೆ ಹಣ ಬಿಡಿಸಿಕೊಳ್ಳಲು ಬರದೆ ಪಕ್ಕದ ಅಪರಿಚಿತನ ಹತ್ತಿರ ಎಟಿಎಮ್ ಹಾಗೂ ಪಿನ್ ಕೋಡ್ ನಂಬರ್ ಕೊಟ್ಟು ಹಣ ಬಿಡಿಸಿಕೊಡುವಂತೆ ಕೇಳಿಕೊಂಡರು.
ಅಪರಿಚಿತ ವ್ಯಕ್ತಿ ಎಟಿಎಂ ಕಾರ್ಡ್ ಬದಲಿಸಿದಲ್ಲದೆ ಹಣ ಬರುತ್ತಿಲ್ಲವೆಂದು ಹೇಳಿ ಅವನ ಬಳಿ ಇದ್ದ ನಕಲಿ ಎಟಿಎಂ ಕಾರ್ಡ್ ಕೊಟ್ಟಿದ್ದು ಇದನ್ನು ಅರಿಯದ ಮಹಿಳೆ ಅವನ ಮಾತನ್ನು ನಂಬಿ ಹೊರಟುಹೋಗಿದ್ದಾರೆ. ಆದರೆ ಅಪರಿಚಿತ ವ್ಯಕ್ತಿ ಹೇಗಿದ್ದರೂ ಪಿನ್ ಕೋಡ್ ತಿಳಿದಿದ್ದರಿಂದ ಹಾಸನಕ್ಕೆ ಹೋಗಿ ಅಲ್ಲಿ ಹಳೆ ಬಸ್ ಸ್ಟಾಂಡ್ ಹತ್ತಿರ ಆ ಎಟಿಎಂ ಬಳಸಿ ಸುಮಾರು 35 ಸಾವಿರ ಹಣವನ್ನು ಅವರ ಖಾತೆಯಿಂದ ಹಣ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ತಮ್ಮ ಮೊಬೈಲ್ ಗೆ ಮೆಸೇಜ್ ಬಂದ ತಕ್ಷಣ ಆ ಮಹಿಳೆಯು ತನ್ನ ಅಳಿಯರಿಗೆ ವಿಷಯ ತಿಳಿಸಿದ್ದು ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಹಣ ಡ್ರಾ ಆಗಿದ್ದು ತಿಳಿದುಬಂದಿದೆ.
ತಕ್ಷಣ ಅವರು ಕಾರ್ಯನ್ಮುಖವಾಗಿ ಬ್ಯಾಂಕ್ ಖಾತೆ ಲಾಕ್ ಮಾಡಿಸಿದರಾರು ಅಷ್ಟರಲ್ಲಾಗಲೆ ಹಣ ಎಟಿಎಂ ನಿಂದ ಡ್ರಾ ಕಳ್ಳನ ಪಾಲಾಗಿದೆ. ವಿಷಯ ತಿಳಿದು ಸಿಸಿಟಿವಿಕ್ಯಾಮರ ದೃಶ್ಯ ನೋಡಿದಾಗ ಅಪರಿಚಿತ ವ್ಯಕ್ತಿ ಹಣ ಕಳೆದಕೊಂಡ ಮಹಿಳೆಯ ಎಟಿಎಂ ಪಡೆದು ಹಣ ಬಿಡಿಸಲು ಪ್ರಯತ್ನಿಸಿದ್ದು ಸಿಸಿಟಿವಿ ದೃಶ್ಯದಲ್ಲಿ ಕಂಡುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post