ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇಲ್ಲಿನ ಜಯನಗರ 9ನೇ ಬಡಾವಣೆಯ ರಾಗಿಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ವತಿಯಿಂದ ದೇವಾಲಯದಲ್ಲಿ ಪ್ರತಿದಿನ ಸಂಜೆ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಇಂದಿನಿಂದ ಐದು ದಿನಗಳ ಕಾಲ ಪ್ರವಚನ ನಡೆಯಲಿದೆ.
ಎಪ್ರಿಲ್ 13ರ ಇಂದಿನಿಂದ ಎಪ್ರಿಲ್ 17ರವರೆಗೂ ಪ್ರತಿದಿನ ಸಂಜೆ 6.30ರಿಂದ 8 ಗಂಟೆಯವರೆಗೂ ಭಾಗವತದ ಸಂದೇಶ ಪ್ರವಚನವನ್ನು ಪಂಡಿತ ಅಶೋಕಾಚಾರ್ಯ ವಿ. ಜೋಶಿ ನಡೆಸಿಕೊಡಲಿದ್ದಾರೆ.
ಶ್ರೀ ದೇವಾಲಯದ ಸಾಂಸ್ಕೃತಿಕ ಮಂದಿರದಲ್ಲಿ ಪ್ರತಿದಿನ ಸಂಜೆ ಪ್ರವಚನ ನಡೆಯಲಿದ್ದು, 26ನೇ ವರ್ಷದ ಪ್ರವಚನ ವಾಹಿನಿ – ಎಪ್ರಿಲ್ 2026ರ ಅಡಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















