ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೇಸಿಗೆ ರಜೆಯಲ್ಲಿ Summer Holiday ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡಲು, ನೈಋತ್ಯ ರೈಲ್ವೆಯು South Western Railway ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ದಾನಾಪುರ ನಡುವೆ ಎರಡು ಟ್ರಿಪ್ಗಳ ವಿಶೇಷ ಎಕ್ಸ್ಪ್ರೆಸ್ ರೈಲುಗಳನ್ನು Bengaluru-Danapur special express train service ಓಡಿಸಲು ನಿರ್ಧರಿಸಿದೆ.
ರೈಲು ಸಂಖ್ಯೆ 06549 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ದಾನಾಪುರ ವಿಶೇಷ ಎಕ್ಸ್ಪ್ರೆಸ್:
ಈ ರೈಲು ಏಪ್ರಿಲ್ 16 ಮತ್ತು ಏಪ್ರಿಲ್ 23, 2026 ರಂದು (ಗುರುವಾರ) ರಾತ್ರಿ 11.00 ಗಂಟೆಗೆ ಎಸ್.ಎಂ.ವಿ.ಟಿ ಬೆಂಗಳೂರಿನಿಂದ ಹೊರಟು, ಭಾನುವಾರ ಬೆಳಿಗ್ಗೆ 01:45 ಗಂಟೆಗೆ ದಾನಾಪುರ ತಲುಪಲಿದೆ.
ರೈಲು ಸಂಖ್ಯೆ 06550 ದಾನಾಪುರ – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ಎಕ್ಸ್ಪ್ರೆಸ್:
ಈ ರೈಲು ಏಪ್ರಿಲ್ 20 ಮತ್ತು ಏಪ್ರಿಲ್ 27, 2026 ರಂದು (ಸೋಮವಾರ) ಬೆಳಿಗ್ಗೆ 08:15 ಗಂಟೆಗೆ ದಾನಾಪುರದಿಂದ ಹೊರಟು, ಬುಧವಾರ ಬೆಳಿಗ್ಗೆ 11:15 ಗಂಟೆಗೆ ಎಸ್.ಎಂ.ವಿ.ಟಿ ಬೆಂಗಳೂರು ತಲುಪಲಿದೆ.
ನಿಲುಗಡೆಗಳು: ಕೃಷ್ಣರಾಜಪುರಂ, ಬಂಗಾರಪೇಟೆ, ಕುಪ್ಪಂ, ಜೊಲಾರ್ಪೆಟ್ಟೈ, ಕಾಟ್ಪಾಡಿ, ರೇಣಿಗುಂಟಾ, ಗೂಡೂರು, ನೆಲ್ಲೂರು, ಒಂಗೋಲ್, ವಿಜಯವಾಡ, ವಾರಂಗಲ್, ಬಲ್ಹಾರ್ಷಾ, ಚಂದ್ರಾಪುರ, ಸೇವಾಗ್ರಾಮ್, ನಾಗ್ಪುರ, ಇಟಾರ್ಸಿ, ಪಿಪಾರಿಯಾ, ಜಬಲ್ಪುರ್, ಕಟ್ನಿ, ಸತ್ನಾ, ಮಾಣಿಕ್ಪುರ್, ಪ್ರಯಾಗ್ರಾಜ್ ಛಿವಕಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್, ಬಕ್ಸರ್ ಮತ್ತು ಅರಾ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ಈ ರೈಲಿನಲ್ಲಿ ಒಂದು ಎಸಿ 2-ಟೈರ್, ಮೂರು ಎಸಿ 3-ಟೈರ್,ಆರು ಸ್ಲೀಪರ್ ಕ್ಲಾಸ್ , ಒಂಬತ್ತು ದ್ವಿತೀಯ ದರ್ಜೆ, ಮತ್ತು ಎರಡು ಲಗೇಜ್/ಬ್ರೇಕ್ ವ್ಯಾನ್ ಬೋಗಿಗಳು ಇರಲಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















