ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಲಿಯುಗ ಕಾಮಧೇನು, ಕಲ್ಪವೃಕ್ಷರೆಂದೇ ಭಕ್ತರ ಮನದಲ್ಲಿ ನೆಲೆಸಿರುವ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಪಟ್ಟಾಭಿಷೇಕ ಹಾಗೂ ವರ್ಧಂತಿ ಅಂಗವಾಗಿ ತ್ಯಾಗರಾಜನಗರದ ರಾಯರ ಮಠದಲ್ಲಿ ಫೆ.19ರಿಂದ 24ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಕುರಿತಂತೆ ಶ್ರೀಮಠ ಮಾಹಿತಿ ನೀಡಿದ್ದು, ಆರು ದಿನಗಳ ಕಾಲ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ರಾಯರ ಸನ್ನಿಧಿಯಲ್ಲಿ ನಡೆಯಲಿವೆ.
ಫೆ. 19, ಗುರುವಾರ (ರಾಯರ ಪಟ್ಟಾಭಿಷೇಕ)
ಬೆಳಗ್ಗೆ 8-00 ರಿಂದ ಶ್ರೀ ರಾಘವೇಂದ್ರ ಸ್ವಾಮಿಗಳ #Shri Raghavendraswamy ಬೃಂದಾವನಕ್ಕೆ ಅಷ್ಟೋತ್ತರ ಪಾರಾಯಣ ಸಹಿತ ಫಲ-ಪಂಚಾಮೃತ ಅಭಿಷೇಕ, ಶ್ರೀ ಸುವಿದ್ಯೇಂದ್ರತೀರ್ಥ ಶ್ರೀಪಾದಂಗಳವರಿಂದ ಸಂಸ್ಥಾನ ಪೂಜೆ ಮತ್ತು ಅನುಗ್ರಹ ಸಂದೇಶ ನಡೆಯಲಿದೆ.
ಅಂದು ಸಂಜೆ 6-00ಕ್ಕೆ ಡಾ.ರಾಯಚೂರು ಶೇಷಗಿರಿದಾಸ್ ಮತ್ತು ಸಂಗಡಿಗರಿಂದ ದಾಸ ವೈಭವ. ಗಾಯನ ಕಾರ್ಯಕ್ರಮ ನಡೆಯಲಿದೆ.
ಫೆ. 20 ರಿಂದ 23ರ ವರೆಗೆ ಪ್ರತಿದಿನ ಬೆಳಗ್ಗೆ ಪೂಜಾ ಕೈಂಕರ್ಯಗಳು, ಸಂಜೆ ವಿವಿಧ ಭಜನಾ ಮಂಡಳಿಗಳ ಸದಸ್ಯರುಗಳಿಂದ ಭಜನಾಮೃತ ನಡೆಯಲಿದೆ.
ಫೆ.24, ಮಂಗಳವಾರ (ರಾಯರ ವರ್ಧಂತಿ ಉತ್ಸವ)
ಅಂದು ಬೆಳಗ್ಗೆ-ಫಲ-ಪಂಚಾಮೃತ ಅಭಿಷೇಕ, ಶ್ರೀ ಗುರುರಾಜರಿಗೆ ಲಕ್ಷ ಪುಷ್ಪಾರ್ಚನೆ ವಿದ್ವಾಂಸರಿಂದ ರಾಯರ ಮಹಿಮೆ ವಿಷಯವಾಗಿ ಧಾರ್ಮಿಕ ಪ್ರವಚನ ನಡೆಯಲಿದೆ.
ಅಂದು ಸಂಜೆ 6-00ಕ್ಕೆ ವಿದ್ವಾನ್ ಶ್ರೀ ಅನಂತ ಮಿಸ್ತಿç ಮತ್ತು ಸಂಗಡಿಗರಿಂದ ದಾಸ ತರಂಗಿಣಿ ಗಾಯನ ಕಾರ್ಯಕ್ರಮ. ನಂತರ ಸಮಾರೋಪ ಸಮಾರಂಭ ಜರುಗಲಿದೆ ಎಂದು ಶ್ರೀಮಠದ ಪದಾಧಿಕಾರಿಗಳು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















